ಪೆರ್ಲ: ಚೆಮ್ನಾಡ್ ಜಮಾಯತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ಮೇಳದಲ್ಲಿ ಶೇಣಿ ಶಾಲಾ ವಿದ್ಯಾರ್ಥಿಗಳು ಹೈಸ್ಕೂಲ್ ವಿಭಾಗದಲ್ಲಿ ಪ್ರತಿಕೃತಿ ಮಾದರಿ (ಸ್ಟಿಲ್ ಮಾಡೆಲ್) ರಚನೆಯ ಸ್ಪರ್ಧೆಯಲ್ಲಿ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶೇಣಿ ಶಾಲಾ ವಿದ್ಯಾರ್ಥಿಗಳಾದ ಅಭಿದೀಪ್ ಹೆಚ್.ಕೆ ಮತ್ತು ಲಕ್ಷ್ಮಿಪ್ರಿಯ ಎಸ್ ತಯಾರಿಸಿದ *ಭಾರತದಲ್ಲಿ ಸುಸ್ಥಿರ ಅಭಿವೃದ್ಧಿ* ಎಂಬ ವಿಷಯದ ಮಾದರಿ ಪ್ರಥಮ ಸ್ಥಾನವನ್ನು ಗಳಿಸಿಕೊಂಡಿದೆ.
ಈ ವಿಜಯಕ್ಕೆ ಶಾಲಾ ಮುಖ್ಯೋಪಾಧ್ಯಾಯ ಶ್ರೀಶ ಕುಮಾರ್, ರಕ್ಷಕ ಶಿಕ್ಷಕ ಸಮಿತಿ ಮತ್ತು ಶಾಲಾ ಆಡಳಿತ ಮಂಡಲಿಯವರು ಅಭಿನಂದನೆ ಸಲ್ಲಿಸಿದ್ದಾರೆ.