ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಇದರ ಆಶ್ರಯದಲ್ಲಿ ಫೆಬ್ರವರಿ 23ಕ್ಕೆ ಸ್ವಾಮಿ ವಿವೇಕಾನಂದ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ಜಯಂತಿಯ ಪ್ರಯುಕ್ತ ಹಿಂದೂ ಯುವ ಸಮಾವೇಶ!

  • 09 Feb 2025 02:54:27 PM

ಬಂಟ್ವಾಳ: ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಮಂಗಳೂರು ಗ್ರಾಮಾಂತರ ಜಿಲ್ಲೆ ಇದರ ಆಶ್ರಯದಲ್ಲಿ ಸ್ವಾಮೀ ವಿವೇಕಾನಂದ ಮತ್ತು ನೇತಾಜಿ ಸುಭಾಷ್ ಚಂದ್ರಬೋಸ್ ಇವರುಗಳ ಜನ್ಮ ಜಯಂತಿಯ ಅಂಗವಾಗಿ *ಹಿಂದೂ ಯುವ ಸಮಾವೇಶವು* ವಿಜೃಂಭಣೆಯಿಂದ ನಡೆಯಲಿದೆ.

 

 23/02/2025 ಆದಿತ್ಯವಾರದಂದು ಮಧ್ಯಾಹ್ನ 3ಕ್ಕೆ ಜೈ ಬಸದಿಯಿಂದ ಪಂಚಲಿಂಗೇಶ್ವರ ದೇವಸ್ಥಾನದ ವರೆಗೆ.

 

  ತಾವೆಲ್ಲರೂ ಈ ಕಾರ್ಯಕ್ರಮಕ್ಕೆ ಬಂದು ಭಾಗವಹಿಸುವ ಮುಖೇನ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿಟ್ಲ ತಾಲೂಕು ಮಂಗಳೂರು ಗ್ರಾಮಾಂತರ ಜಿಲ್ಲೆ ಹಿಂದು ಜಾಗರಣ ವೇದಿಕೆಯ ಸಂಯೋಜಕರು ಮತ್ತು ಸರ್ವ ಸದಸ್ಯರು ವಿನಂತಿಸಿದ್ದಾರೆ.