ಮೈಸೂರು ಚಲೋ: ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿಯಿಂದ ಫೆ.24 ರಂದು ಬೃಹತ್ ಜನಾಂದೋಲನ ಜಾಗೃತಿ ಸಭೆ!

  • 19 Feb 2025 11:04:29 PM

ಮೈಸೂರು: ದೇಶದ ಆಂತರಿಕ ಸುರಕ್ಷತೆ, ಅಖಂಡತೆ ಮತ್ತು ಏಕತೆಗೆ ಸವಾಲಾಗುತ್ತಿರುವ ರಾಷ್ಟ್ರವಿರೋಧಿ ಶಕ್ತಿಗಳ ವಿರುದ್ಧ ಜಾಗೃತಿಯನ್ನು ಮೂಡಿಸಲು, ಫೆಬ್ರವರಿ 24ರಂದು ಮೈಸೂರಿನಲ್ಲಿ ಬೃಹತ್ ಜನಾಂದೋಲನ ಜಾಗೃತಿ ಸಭೆ ಆಯೋಜನೆಯ ಮಾಡಲಾಗಿದೆ ಎಂದು ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿ ಘೋಷಿಸಿದೆ.

 

ಈ ಕುರಿತಾಗಿ ಫೆಬ್ರವರಿ 18 ರಂದು ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು. ಸಮಿತಿಯ ಸಂಚಾಲಕರಾದ ಶ್ರೀ ಮಹೇಶ್ ಕಡಗದಾಳು, ಸಹ ಸಂಚಾಲಕರಾದ ಶ್ರೀ ಚೇತನ್ ಮೈಸೂರು, ಶ್ರೀ ಪ್ರಜ್ವಲ್, ಹಾಗೂ ಶ್ರೀ ಬಸವರಾಜು ಶ್ರೀರಂಗಪಟ್ಟಣ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಈ ಪತ್ರಿಕಾಗೋಷ್ಠಿಯಲ್ಲಿ ಮೈಸೂರಿನ ಉದಯಗಿರಿಯಲ್ಲಿ ನಡೆದ ಗಲಭೆಯ ಕುರಿತು, ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ರೀತಿಯಲ್ಲಿ ಪೋಸ್ಟರ್ ಹಾಕಿ ದೇಶದ ಕಾನೂನು ಮತ್ತು ಸಂವಿಧಾನಕ್ಕೆ ಕಿಂಚಿತ್ತು ಗೌರವ ನೀಡದೆ ಕಾನೂನನ್ನು ಕೈಗೆತ್ತಿಕೊಳ್ಳುವ ದುಷ್ಕರ್ಮದ ಕುರಿತು ಹಾಗೆಯೇ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಾಯಿತು.

 

ಈ ಗಲಭೆಯ ಹಿಂದಿನ ನಿಷೇಧಿತ ಪಿಎಫ್ಐ (PFI) ಸಂಘಟನೆಯ ಭಾಗವಹಿಸುವಿಕೆ ಬಗ್ಗೆ ಅನುಮಾನವಿದೆ ಎಂಬುದಾಗಿಯೂ ಗಲಭೆಗೆ ಪ್ರಚೋದನಾಕಾರಿ ಭಾಷಣ ಮಾಡಿದ್ದ ಮೌಲ್ವಿ, ಪಿಎಫ್ಐಯ ರಾಜಕೀಯ ಪಕ್ಷವಾದ ಎಸ್‌ಡಿಪಿಐ (SDPI) ಕಾರ್ಯಕರ್ತನಾಗಿದ್ದಾನೆ ಎಂಬ ಮಾಹಿತಿ ಬಹಿರಂಗಗೊಂಡಿದೆ.

 

ಪೊಲೀಸರ ಮೇಲೆ ದಾಳಿ ನಡೆಸುವ ಮೂಲಕ ಪೊಲೀಸ್ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳ (NIA) ತನಿಖೆ ನಡೆಸಬೇಕು ಹಾಗೂ ಬಂಧಿಸಿದವರ ಮೇಲೆ UAPA ಕಾಯ್ದೆಯ ಅಡಿಯಲ್ಲಿ ಕೇಸು ದಾಖಲಿಸಬೇಕು ಎಂಬುದಾಗಿ ಸಮಿತಿಯು ಆಗ್ರಹ ವ್ಯಕ್ತಪಡಿಸಿದೆ.

 

ಭಾರತದ ಅಂತರಿಕ ಸುರಕ್ಷತೆ, ಅಖಂಡತೆ, ಏಕತೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದ ಸಂರಕ್ಷಣೆಗೆ ಸಮರ್ಥವಾಗಿ ನಿಲ್ಲಬೇಕಾದ ಅವಶ್ಯಕತೆ ತುಂಬಾ ಇದೆ. ಆದ್ದರಿಂದ ಫೆಬ್ರವರಿ 24ರಂದು ಬೆಳಿಗ್ಗೆ 11:00 ಗಂಟೆಗೆ ಮೈಸೂರಿನ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಬೃಹತ್ ಜನಾಂದೋಲನ ಜಾಗೃತಿ ಸಭೆ ನಡೆಯಲಿದೆ. ಈ ಆಂದೋಲನಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜಾಗೃತ, ಸಂಘಟಿತ, ಸುರಕ್ಷಿತ ಸಮಾಜಕ್ಕಾಗಿ ಈ ಜನಾಂದೋಲನ ನಡೆಯಲಿದೆ ಎಂದು ಸಮಿತಿಯ ಪ್ರಮುಖರು ಕರೆ ನೀಡಿದ್ದಾರೆ.