ನಿಷೇಧವಿದ್ದರೂ ಸಹ ಹೈಕೋರ್ಟಿನ ಅನುಮತಿಯೊಂದಿಗೆ ಮೈಸೂರಿನಲ್ಲಿ ಮೈಸೂರು ಚಲೋ..ಜನಾಂದೋಲನ ಸಭೆ ಯಶಸ್ವಿ!

  • 25 Feb 2025 04:32:15 PM

ಮೈಸೂರು: ಮೈಸೂರು ಚಲೋ ಹೋರಾಟಕ್ಕೆ ಪೊಲೀಸ್ ಇಲಾಖೆಯು ಅನುಮತಿ ನಿರಾಕರಿಸಿದ್ದನ್ನು ಪ್ರಶ್ನಿಸಿ, ಇಂದು ರಾಜ್ಯ ಹೈಕೋರ್ಟಿನಲ್ಲಿ ಹಿಂದು ಜಾಗರಣ ವೇದಿಕೆಯ ಹಿರಿಯ ವಕೀಲರಾದ ಶ್ರೀ ಅರುಣ್ ಶ್ಯಾಮ್ ಅವರು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಬಳಿಕ ಏಕಸದಸ್ಯ ಪೀಠ ಮಧ್ಯಾಹ್ನದೊಳಗೆ ಹೋರಾಟಕ್ಕೆ ಅನುಮತಿ ನೀಡಿತು. ಅನುಮತಿ ದೊರೆತ ಬಳಿಕ ಮೈಸೂರಿನ ಮಹಾರಾಜ ಮೈದಾನದ ವಾಲಿಬಾಲ್ ಮೈದಾನದಲ್ಲಿ ಸಾರ್ವಜನಿಕ ಸಭೆ ಯಶಸ್ವಿಯಾಗಿ ಜರಗಿತು.

 

ಸಭೆಯಲ್ಲಿ ಭಾಜಪ ರಾಜ್ಯ ಉಪಾಧ್ಯಕ್ಷರಾದ ಶ್ರೀ ಎನ್. ಮಹೇಶ್ ಪ್ರಸ್ತಾವಿಕ ಭಾಷಣವನ್ನು ಮಾಡಿದರು. ಹಿಂದು ಜಾಗರಣ ವೇದಿಕೆಯ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದಂತಹ ಶ್ರೀ ಕೆ.ಟಿ. ಉಲ್ಲಾಸ್ ಅವರು ದಿಕ್ಸೂಚಿ ಭಾಷಣ ನೀಡಿದರು. ಸಮಿತಿಯ ಸಂಚಾಲಕರಾದ ಶ್ರೀ ಮಹೇಶ್ ಕಡಗದಾಳು ಸ್ವಾಗತಿಸಿ, ಸಹ ಸಂಚಾಲಕರಾದ ಶ್ರೀ ಬಸವರಾಜು ಶ್ರೀರಂಗಪಟ್ಟಣ ವಂಡಿಸಿದರು.

 

ಈ ಹೋರಾಟದಲ್ಲಿ ಸಂಘ ಮತ್ತು ವಿಚಾರ ಪರಿವಾರ ಸಂಘಟನೆಗಳ ಪ್ರಮುಖರು, ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.