ಬಂಟ್ವಾಳ: ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಮಂಗಳೂರು ಗ್ರಾಮಾಂತರ ಜಿಲ್ಲೆ ಇದರ ಆಶ್ರಯದಲ್ಲಿ ಸ್ವಾಮೀ ವಿವೇಕಾನಂದ ಮತ್ತು ನೇತಾಜಿ ಸುಭಾಷ್ ಚಂದ್ರಬೋಸ್ ಇವರುಗಳ ಜನ್ಮ ಜಯಂತಿಯ ಪ್ರಯುಕ್ತ *ಹಿಂದೂ ಯುವ ಸಮಾವೇಶ* ವಿಜೃಂಭಣೆಯಿಂದ ಜರಗಲಿದೆ.
ಮಾರ್ಚ್ 2 2025 ಆದಿತ್ಯವಾರದಂದು ಸಂಜೆ 3 ಗಂಟೆಯಿಂದ ಬಿಸಿ ರೋಡ್ ಕೈಕಂಬದಿಂದ ರಕ್ತೇಶ್ವರಿ ದೇವಸ್ಥಾನದ ಮುಂಭಾಗದ ವರೆಗೆ ಶೋಭ ಯಾತ್ರೆ ನಡೆಯಲಿದೆ. ಸಂಜೆ 3.30 ಗಂಟೆಗೆ ಸರಿಯಾಗಿ ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ದಿಕ್ಸೂಚಿ ಭಾಷಣವನ್ನು ಗೌರವನ್ವಿತ ಶ್ರೀ ಜಗದೀಶ್ ಕಾರಂತ್ ಅವರು ನೀಡಲಿದ್ದಾರೆ. ಹಾಗೆಯೇ ಶ್ರೀ ರಾಮಕೃಷ್ಣ ತಪೋವನ, ಪೊಳಲಿಯ ಪೂಜ್ಯ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಅವರು ದಿವ್ಯ ಉಪಸ್ಥಿತಿಯಿಂದ ಕಾರ್ಯಕ್ರಮವನ್ನು ಅಲಂಕರಿಸಲಿದ್ದಾರೆ.
ತಾವೆಲ್ಲರೂ ಈ ಕಾರ್ಯಕ್ರಮಕ್ಕೆ ಬಂದು ಭಾಗವಹಿಸುವ ಮುಖೇನ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬಂಟ್ವಾಳ ತಾಲೂಕು ಮಂಗಳೂರು ಗ್ರಾಮಾಂತರ ಜಿಲ್ಲೆ ಹಿಂದು ಜಾಗರಣ ವೇದಿಕೆಯ ಸಂಯೋಜಕರು ಮತ್ತು ಸರ್ವ ಸದಸ್ಯರು ವಿನಂತಿಸಿದ್ದಾರೆ.