ಪುತ್ತಿಗೆ : ಅಂಗಡಿಮೊಗರು, ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಬ್ರಹ್ಮಕಲಶೋತ್ಸವದ ಸಮಿತಿ ಮಹಾಸಭೆ ಹಾಗೂ ಉಪ ಸಮಿತಿ ರಚನೆಯು ಬುಧವಾರ ಕ್ಷೇತ್ರ ಸಭಾಭವನದಲ್ಲಿ ನಡೆಯಿತು.
ಸಮಿತಿ ಅಧ್ಯಕ್ಷರಾದ ಹಿರಿಯ ಧಾರ್ಮಿಕ ಮುಂದಾಳು ಉದಯಶಂಕರ ಭಟ್ ಕರೋಡಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಗಿರಿಧರ್ ಶೆಟ್ಟಿ ಮಂಗಳೂರು ಅವರು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಆಡಳಿತ ಮುಖ್ಯಸ್ಥರಾದ ನ್ಯಾಯವಾದಿ ಇಚ್ಲಂಪಾಡಿ ಸುಬ್ಬಯ್ಯ ರೈ,ಮುಗು ಶ್ರೀ ಸುಬ್ರಾಯ ಕ್ಷೇತ್ರ ಆಡಳಿತ ಮೊಕ್ತೇಸರ ರವೀಂದ್ರನಾಥ್ ನಾಯಕ್ ಶೇಣಿ,ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ, ಪೈವಳಿಕೆ ಗ್ರಾ.ಪಂ.ಸದಸ್ಯ ಆಶೋಕ್ ಭಂಡಾರಿ, ಎಂ. ಎನ್. ಮಯ್ಯ, ಪಟ್ಲ ದಾಮೋಧರ ಶೆಟ್ಟಿ, ಬಾಲಸುಬ್ರಹ್ಮಣ್ಯ ಭಟ್ ಚಕ್ಕಣಿಕೆ, ಉಮಾನಾಥ ಭಂಡಾರಿ ಪುತ್ತಿಗೆ, ಶಂಕರ ರೈ ಮಾಸ್ತರ್, ಅಶೋಕ್ ಮಾಸ್ತರ್ ಬಾಡೂರು,ವೇಣುಗೋಪಾಲ ಶೆಟ್ಟಿ, ಗಿರೀಶ್ ಭಟ್ ಪುತ್ತಿಗೆ, ಅಮರನಾಥ ರೈ ಚೀಂಕಣಮೊಗರು, ಸುಂದರ ಶೆಟ್ಟಿ ಭಂಡಾರಗುತ್ತು, ಇನ್ನಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಉಪ ಸಮಿತಿಗಳನ್ನು ರಚನೆ ಮದಾಯಿತು. ಕಾರ್ಯಕ್ರಮಕ್ಕೆ ಸೇವಾ ಸಮಿತಿಯ ಅಧ್ಯಕ್ಷರಾದ ಡಿ.ದಾಮೋದರ್ ಸ್ವಾಗತಿಸಿ ಕೇಶವ ಮಾಸ್ತರ್ ವಂದಿಸಿದರು. ಡಿ.ರಾಜೇಂದ್ರ ರೈ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.