ಕಡಬ: ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ನೇತೃತ್ವದಲ್ಲಿ ತಾಲೂಕು ಮಟ್ಟದ ಮಂದಿರ ಅಧಿವೇಶನ ಕಾರ್ಯಕ್ರಮವು ವಿಶೇಷವಾಗಿ ನಡೆಯಿತು.
ಹಿಂದೂಗಳು ಸಂಘಟಿತರಾಗಬೇಕು! - ಶ್ರೀ ಚಂದ್ರ ಮೊಗವೀರ
ಭಾರತಾದ್ಯಂತ ಮಂದಿರ ಮಹಾಸಂಘದ ಕಾರ್ಯಕ್ಕೆ ಹಿಂದೂಗಳ ಉತ್ತಮ ಬೆಂಬಲ ದೊರಕುತ್ತಿರುವುದು ಸಂತೋಷಕರವಾದ ವಿಷಯವೆಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ ಚಂದ್ರ ಮೊಗವೀರ ಅವರು ಹೇಳಿದರು. ಹಾಗೆಯೇ ಕರ್ನಾಟಕ ರಾಜ್ಯದ ದೇವಸ್ಥಾನಗಳ ಅಭಿವೃದ್ಧಿಗಾಗಿ ಹಿಂದೂಗಳು ಕೈ ಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮವನ್ನು ಶ್ರೀ ವಿಶ್ವೇಶ್ವರ ಭಟ್ (ಶ್ರೀ ಮಹಾಬಲೇಶ್ವರ ದೇವಸ್ಥಾನ, ಕಡಬ), ಶ್ರೀ ಸತ್ಯನಾರಾಯಣ ಹೆಗಡೆ (ಮರ್ದಾಳ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋಧ್ಧಾರ ಅಧ್ಯಕ್ಷ), ಶ್ರೀ ಸುರೇಶ್ ಕೆ.ಎಸ್ ಮತ್ತು ಶ್ರೀ ಚಂದ್ರ ಮೊಗವೀರ ಇವರು ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಹಿಂದೂ ಧರ್ಮ ರಕ್ಷಣೆಗೆ ದೇವಸ್ಥಾನಗಳ ಮೂಲಕ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕು - ಶ್ರೀ ಸುರೇಶ್ ಕೆ.ಎಸ್
ದೇವಸ್ಥಾನ ಜೀರ್ಣೋಧ್ಧಾರ ಮತ್ತು ವ್ಯವಸ್ಥಾಪನಾ ಸಮಿತಿಗಳು ನಿರಂತರವಾಗಿ ಕಾರ್ಯನಿರತರಾಗಬೇಕು. ದೇವಸ್ಥಾನದಲ್ಲಿ ನಡೆಯುವಂತಹ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳಿಗೂ ಹೆಚ್ಚಿನ ಹಿಂದೂ ಭಕ್ತಾದಿಗಳನ್ನು ಸೇರಿಸಲು ಪ್ರಯತ್ನಿಸಬೇಕು. ಹಿಂದೂ ಸಂಘಟನೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಶ್ರೀ ಸುರೇಶ್ ಕೆ.ಎಸ್ ಹೇಳಿದರು.
ದೇವಸ್ಥಾನಗಳ ನಿರ್ವಹಣೆಗೆ ಶ್ರದ್ಧೆ ಮತ್ತು ಭಕ್ತಿ ಅಗತ್ಯ - ಶ್ರೀ ಸತ್ಯನಾರಾಯಣ ಹೆಗಡೆ
ದೇವಸ್ಥಾನ ಎನ್ನುವುದು ಗ್ರಾಮದ ಶಾಂತಿ ಮತ್ತು ನೆಮ್ಮದಿಗೆ ಆದಾರಸ್ಥಂಭವಾಗಿರುತ್ತದೆ. ಪುರೋಹಿತರು, ಭಜನಾ ಮಂಡಳಿ, ಮತ್ತು ಭಕ್ತಾದಿಗಳು ಯಜ್ಞ-ಯಾಗ, ಪೂಜಾ ಸೇವೆಗಳನ್ನು ಭಕ್ತಿಯಿಂದ ಕೈಗೊಳ್ಳಬೇಕು ಎಂದು ಮರ್ದಾಳ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋಧ್ಧಾರ ಅಧ್ಯಕ್ಷರಾಗಿರುವ ಅವರು ಶ್ರೀ ಸತ್ಯನಾರಾಯಣ ಹೆಗಡೆ ಹೇಳಿದರು.
ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಬೇಕು - ಪ್ರಶಾಂತ್ ಶಬರಾಯ
ಹಿಂದಿನ ದಿನಗಳಲ್ಲಿ ದೇವಸ್ಥಾನಗಳು ೧೪ ವಿದ್ಯೆ ಮತ್ತು ೪೪ ಕಲೆಗಳ ಕೇಂದ್ರವಾಗಿದ್ದವು. ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡುವ ಮೂಲಕ ಗ್ರಾಮದಲ್ಲಿ ಧಾರ್ಮಿಕ ಚೈತನ್ಯ ವೃದ್ಧಿಯಾಗಬೇಕು. ಅದಕ್ಕಾಗಿ ದೇವಸ್ಥಾನದ ಸ್ವಚ್ಛತೆ, ದೇವರ ಅಪಹಾಸ್ಯ ಮಾಡುವವರ ಪ್ರವೇಶ ನಿಷೇಧ ಮಾಡುವುದು ಮದ್ಯ ಮಾಂಸದ ಮಾರಾಟ ತಡೆಯುವಂತಹ ಕ್ರಮಗಳನ್ನು ಜಾರಿಗೆ ತರವುದು ಹಾಗೆಯೇನಿಯಮಿತ ಉತ್ಸವಗಳಲ್ಲಿ ಧಾರ್ಮಿಕ ಪ್ರವಚನಗಳ ಆಯೋಜನೆಯನ್ನು ಮಾಡಬೇಕು ಎಂದು ಪಟ್ರಮೆಯ ಪ್ರಶಾಂತ್ ಶಬರಾಯ ವಿಶ್ವಸ್ಥರಿಗೆ ಕರೆ ನೀಡಿದರು.
ಭಾನುವಾರ ನಡೆದ ರಾಜ್ಯಮಟ್ಟದ ಮಂದಿರ ಅಧಿವೇಶನದಿಂದ ಸ್ಫೂರ್ತಿ - ಶ್ರೀ ವಿಶ್ವೇಶ್ವರ ಭಟ್
ಬೆಂಗಳೂರುನಲ್ಲಿ ನಡೆದ ರಾಜ್ಯಮಟ್ಟದ ಮಂದಿರ ಅಧಿವೇಶನದಿಂದ ಸ್ಫೂರ್ತಿ ಪಡೆದು, ಕಡಬದಲ್ಲಿ ತಾಲೂಕು ಮಟ್ಟದ ಅಧಿವೇಶನ ಯಶಸ್ವಿಯಾಗಿ ಆಯೋಜಿಸಲಾಗಿದೆ. ಮುಂದೆಯೂ ದೇವಸ್ಥಾನಗಳ ಸಂರಕ್ಷಣೆಗೆ ಹಿಂದೂಗಳು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕೆಂದು ಶ್ರೀ ವಿಶ್ವೇಶ್ವರ ಭಟ್ ಅವರು ಹೇಳಿದರು.