ಪರಶುರಾಮ ಥೀಮ್ ಪಾರ್ಕ್ ಪ್ರಕರಣ;!ಕಾಂಗ್ರೆಸ್‌ ಮೇಲೆ ಗಂಭೀರ ಆರೋಪ ಮಾಡಿದ ಶಾಸಕ ಸುನೀಲ್ ಕುಮಾರ್ ?

  • 14 Nov 2024 10:26:03 AM

ಹಿಂದೂ ರಿಪಬ್ಲಿಕ್ ನ್ಯೂಸ್ :- ರಾಜ್ಯದಾದ್ಯಂತ ಭಾರೀ ಸುದ್ದಿಯಾಗಿದ್ದ ಕಾರ್ಕಳದ ಪರಶುರಾಮ ಥೀಮ್‌ ಪಾರ್ಕ್ ನಲ್ಲಿ‌ ನಡೆದಿದೆ‌ ಎನ್ನಲಾದ ಭ್ರಷ್ಟಾಚಾರ ಪ್ರಕರಣ ಮತ್ತೆ ಮುನ್ನೆಲೆಗೆ‌ ಬಂದಿದ್ದು, ಅಲ್ಲಿನ ಶಾಸಕ ಸುನೀಲ್‌ ಕುಮಾರ್ ಈ ಬಗ್ಗೆ  ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ‌ ಬಗೆಗಿನ ಕಂಪ್ಲೀಟ್ ಡೀಟಿಯಲ್ಸ್ ಇಲ್ಲಿದೆ.

ಸುನೀಲ್‌ ಕುಮಾರ್ ಹೇಳಿದ್ದೇನು?

ಈ‌ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತಮಾಡಿರ ಶಾಸಕ ಸುನೀಲ್‌ ಕುಮಾರ್, 'ಸರ್ಕಾರಿ‌ ಕಾಮಗಾರಿಯೊಂದಕ್ಕೆ ಖಾಸಗಿ ದೂರುಗಳನ್ನು ಪರಿಗಣಿಸಿ ಎಪ್.ಐ.ಆರ್ ದಾಖಲಿಸುವ ಮತ್ತು ತನಿಖೆ ನಡೆಸುವ ಹೊಸ ಪದ್ದತಿ ಕಾಂಗ್ರೆಸ್ ಸರ್ಕಾರದ ಅಧೀನದಲ್ಲಿ ಆರಂಭಗೊಂಡಿದೆ. ಕೊಲೆ ಆರೋಪಿಗೆ 3 ದಿನ‌ ಕಸ್ಟಡಿ ಆದರೆ ಪರಶುರಾಮ ಮೂರ್ತಿಯ ಶಿಲ್ಪಿಯನ್ನು 7 ದಿನಗಳ ವರೆಗೆ ಪೊಲೀಸರು ಕಸ್ಟಡಿಯಲ್ಲಿಟ್ಟುಕೊಂಡಿದ್ದಾರೆ ಎಂದರೆ ಇದೆಲ್ಲದರ ಹಿಂದಿನ ಸೂತ್ರದಾರ ಯಾರು ಎಂಬುದು‌ ರಾಜ್ಯದ ಜನತೆಗೆ ಗೊತ್ತಿದೆ' ಎಂದಿದ್ದಾರೆ.

ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು!

ಮಾತು ಮುಂದುವರೆಸಿದ ಕಾರ್ಕಳ ಶಾಸಕರು, ಪರಶುರಾಮ ಮೂರ್ತಿಯ ವಿನ್ಯಾಸ ಬದಲಿಸಲು ಜಿಲ್ಲಾಡಳಿತವೇ ಒಪ್ಪಿಗೆ ನೀಡಿದೆ.‌ ಜೊತೆಗೆ‌ ಪೊಲೀಸ್ ಭದ್ರತೆಯಲ್ಲೇ ಮೂರ್ತಿಯ ಮೇಲ್ಬಾಗವನ್ನು‌ ಕೊಂಡೊಯ್ಯಲಾಗಿದೆ. ಹೀಗಿದ್ದರೂ ರಾಜ್ಯ ಸರ್ಕಾರ ಪ್ರಕರಣದ ದಿಕ್ಕು ತಪ್ಪಿಸುವುದರೊಂದಿಗೆ ಅಭಿವೃದ್ಧಿಗೆ ಅಡ್ಡಗಾಲು‌ ಹಾಕುತ್ತಿದೆ' ಎಂದು ಅವರು ಆರೋಪಿಸಿದ್ದಾರೆ.