ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದಲ್ಲಿ ಜೂನ್ 20ರಿಂದ ಆರಂಭವಾದ ಧಾರಾಕಾರ ಮಳೆಯು ರಾಜ್ಯವನ್ನು ತತ್ತರಿಸಿರಿಸಿ ಬಿಟ್ಟಿದೆ.
ಇದುವರೆಗೆ ಕನಿಷ್ಠ 78 ಮಂದಿ ಜೀವ ಕಳೆದುಕೊಂಡಿದ್ದಾರೆ ಮತ್ತು 37 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಅಧಿಕಾರಿಗಳ ಪ್ರಕಾರ, 50 ಮಂದಿ ಭೂಕುಸಿತ, ದಿಢೀರ್ ಪ್ರವಾಹ ಹಾಗೂ ಮೇಘಸ್ಫೋಟದಂತಹ ಪ್ರಕೃತಿಕ ವಿಕೋಪಗಳಲ್ಲಿ ಮೃತರಾಗಿದ್ದು, 28 ಮಂದಿ ಕೆಟ್ಟ ಹವಾಮಾನದಿಂದ ಉಂಟಾದ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದಾಗಿದೆ.
ಅಲ್ಲಿನ ಮಂಡಿ ಜಿಲ್ಲೆ ಅತ್ಯಧಿಕ ಹಾನಿಗೆ ಗುರಿಯಾದ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ. ಪ್ರವಾಹದಿಂದ 14 ಮಂದಿ, ನೀರಿನಲ್ಲಿ ಮುಳುಗಿ 8 ಮಂದಿ, ವಿದ್ಯುತ್ ಆಘಾತ ಮತ್ತು ಆಕಸ್ಮಿಕ ಜಲಪಾತಗಳಿಂದ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕೆಲವು ಪ್ರಕರಣಗಳಲ್ಲಿ ಹಾವು ಕಡಿತ ಹಾಗೂ ಇತರ ಅನಾಹುತಗಳಿಂದ ಸಾವಿನ ಘಟನೆಗಳು ನಡೆದಿದೆ.
ಈ ಭೀಕರ ಪರಿಸ್ಥಿತಿಯಿಂದ ಹಿಮಾಚಲದ ಜನಜೀವನ ತತ್ತರಿಸಿ ಹೋಗಿದ್ದು, ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ರಾಜ್ಯ ಸರಕಾರ ಹಾಗೂ ಕೇಂದ್ರದಿಂದ ಸಹಾಯ ಕಾರ್ಯ ಮುಂದುವರೆದಿದ್ದು, ಜನತೆ ಎಚ್ಚರಿಕೆಯಿಂದ ಹಾಗೂ ಸುರಕ್ಷಿತ ಪ್ರದೇಶಗಳಲ್ಲಿ ಉಳಿಯುವಂತೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.