ಪುತ್ತೂರಿನಲ್ಲಿ ನಾಪತ್ತೆಯಾಗಿ ಬೆಂಗಳೂರುನಲ್ಲಿ ಪತ್ತೆಯಾದ ರೂಪ ಮನೆಗೆ ಬಿಜೆಪಿ ಮತ್ತು ಹಿಂದೂ ಸಂಘಟನೆ ಮುಖಂಡರ ಭೇಟಿ!

  • 07 Jul 2025 05:40:45 PM


ಪುತ್ತೂರು: ಪುತ್ತೂರಿನಿಂದ ಇತ್ತೀಚೆಗೆ ನಾಪತ್ತೆಯಾಗಿದ್ದು, ನಂತರ ಬೆಂಗಳೂರಿನಲ್ಲಿ ಪತ್ತೆಯಾದ ಯುವತಿ ರೂಪ ಅವರ ಮನೆಗೆ ಬಿಜೆಪಿ ಪ್ರಮುಖರು ಹಾಗೂ ಹಿಂದೂ ಸಂಘಟನೆಯ ಮುಖಂಡರು ಭೇಟಿ ನೀಡಿದ್ದಾರೆ.

 

ಯುವತಿಯ ಪತ್ತೆಯಾದ ನಂತರ, ಹಿಂದೂ ಸಂಘಟನೆಯ ಮುಖಂಡರು, ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದು, ಅವರೊಂದಿಗೆ ಮಾತನಾಡಿದ್ದಾರೆ.

 

 

ಈ ಸಂದರ್ಭದಲ್ಲಿ ಪುತ್ತೂರು ಬಿಜೆಪಿ ಮಂಡಲಾಧ್ಯಕ್ಷ ದಯಾನಂದ ಶೆಟ್ಟಿ,ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್,ವಿದ್ಯಾಧರ ಜೈನ್, ಬಿಜೆಪಿ ಪುತ್ತೂರು ಬಿಜೆಪಿ ಪ್ರಮುಖರಾದ ನಿತೇಶ್ ಕುಮಾರ್ ಶಾಂತಿವನ, ಹರೀಶ್ ಬಿಜತ್ರೆ,ಅಶೋಕ್ ಮೂಡಂಬೖಲು

 ಸಂಘಟನೆಯ ಪ್ರಮುಖ ಅಕ್ಷಯ್ ರಜಪೂತ್ (ಕಲ್ಲಡ್ಕ) ಸೇರಿದಂತೆ ಹಲವು ಮುಖಂಡರು ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು

 

ಈ ಸಂದರ್ಭದಲ್ಲಿ ಯುವತಿಯ ಸುರಕ್ಷಿತವಾಗಿ ಪತ್ತೆಯಾಗಿದ್ದು ಸಂತೋಷದ ವಿಷಯ ಎಂದು ಪ್ರತಿಯೊಬ್ಬರೂ ಅಭಿಪ್ರಾಯ ವ್ಯಕ್ತಪಡಿಸಿದರು. 

 

 

 ಈ ಘಟನೆ ಹಿನ್ನೆಲೆ, ಯುವತಿಯ ಪತ್ತೆಗೆ ಸಹಕರಿಸಿದ ಪೊಲೀಸ್ ಇಲಾಖೆ ಹಾಗೂ ಸಮಾಜದ ನಿಷ್ಠಾವಂತ ಕಾರ್ಯಕರ್ತರ ಪರಿಶ್ರಮವನ್ನು ಅಭಿನಂದಿಸಲಾಯಿತು.

 

 ಸಮಾಜಮುಖಿ ಸಂಘಟನೆಗಳ ಜೊತೆಗೆ ರಾಜಕೀಯ ಮುಖಂಡರ ಸಹಾನುಭೂತಿ ಹಾಗೂ ಸ್ಪಂದನೆಗೆ ಸ್ಥಳೀಯರು ಧನ್ಯವಾದ ವ್ಯಕ್ತಪಡಿಸಿದ್ದಾರೆ.