ಉಡುಪಿ:ಕರ್ನಾಟಕ ಸರ್ಕಾರದ ಹಿಂದೂ ವಿರೋಧಿ ನಡೆಯನ್ನು ಖಂಡಿಸಿ, ನಾಳೆ ಉಡುಪಿಯಲ್ಲಿ ಹಿಂದು ಜಾಗರಣ ವೇದಿಕೆಯು ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಗೆ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದ ಪ್ರಾಂತ ಸಹ ಸಂಚಾಲಕ ಸತೀಶ್ ದಾವಣಗೆರೆ ಅವರ ಪ್ರವೇಶವನ್ನು ಉಡುಪಿ ಜಿಲ್ಲಾಡಳಿತ ತಡೆದಿದೆ.
ಜಿಲ್ಲಾಡಳಿತವು ಅವರಿಗೆ ಮುಂದಿನ ಎರಡು ತಿಂಗಳ ಕಾಲ ಉಡುಪಿ ಜಿಲ್ಲೆಗೆ ನಿರ್ಬಂಧವನ್ನು ಹೇರಿದೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಸಂವಿಧಾನದಿಂದಲೇ ಕಲ್ಪಿಸಲಾಗಿದೆ.
ಹಾಗಿದ್ದಲ್ಲಿ, ಹಿಂದೂ ಸಂಘಟನೆಗಳ ಮುಖಂಡನೊಬ್ಬರ ವಾಕ್‌ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಈ ಕ್ರಮವನ್ನು ಹಿಂಜಾವೇ ಹಾಗೂ ಹಿಂದೂಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ರಾಜ್ಯ ಸರ್ಕಾರ ಹಿಂದು ಸಂಘಟನೆಗಳ ವಿರುದ್ಧ ತಾವು ತೆಗೆದುಕೊಳ್ಳುತ್ತಿರುವ ಕಾನೂನು ವಿರೋಧಿ ಹಾಗೂ ಮತಪಕ್ಷಪಾತದ ನಡವಳಿಕೆ ತೀವ್ರವಾಗಿ ಚರ್ಚೆಗೆ ಗ್ರಾಸವಾಗುತ್ತಿದ್ದು, ಸರಕಾರದ ಈ ಕ್ರಮ ಅತ್ಯಂತ ಖಂಡನೀಯವಾದುದು ಎಂದು ಹಿಂದು ಸಮಾಜ ಆಕ್ರೋಶಗೊಂಡಿದೆ.