ಪುತ್ತೂರು: ಸಮೀಪದ ಮುಂಡಾಜೆಯ ನಿವಾಸಿಯಾಗಿರುವ 19 ವರ್ಷದ ರೂಪಾ ಎಂಬ ವಿದ್ಯಾರ್ಥಿನಿ, ಪೇಟೆಗೆ ಹೋಗುವುದಾಗಿ ಮನೆಯವರಿಗೆ ತಿಳಿಸಿ ಹೊರಟ್ಟಿದ ಬಳಿಕ ನಾಪತ್ತೆಯಾಗಿದ್ದ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯುವತಿಯು ಪರೀಕ್ಷಾ ಫಲಿತಾಂಶ ಕಡಿಮೆ ಬಂದುದರಿಂದ ಮನೆ ಬಿಟ್ಟು ಹೋಗಿರುವುದಾಗಿ ತಿಳಿದು ಬಂದಿದೆ.
ಹಿಂದೂ ಸಂಘಟನೆಯ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಅವರು ಯುವತಿಯ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದರು.
ಪ್ರಕರಣ ದಾಖಲಾತಿಗೆ ಹಿಂದೂ ಸಂಘಟನೆಯ ಪ್ರಮುಖ ಅಕ್ಷಯ್ ರಜಪೂತ್ ಹಾಗೂ ಇತರ ಕಾರ್ಯಕರ್ತರು ಕುಟುಂಬಕ್ಕೆ ಸಹಕಾರ ನೀಡಿದ್ದರು.
ಪ್ರಕರಣ ದಾಖಲಾದ ಬಳಿಕ, ಪುತ್ತೂರು ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಕಾರ್ಯತತ್ಪರವಾಗಿ ಹುಡುಕಾಟ ನಡೆಸಿದರು.
ಇದೀಗ ಲಭಿಸಿರುವ ಮಾಹಿತಿಯಂತೆ, ಯುವತಿ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಪೊಲೀಸರು ಆಕೆಯನ್ನು ಪುತ್ತೂರಿಗೆ ಸುರಕ್ಷಿತವಾಗಿ ಕರೆತಂದಿದ್ದಾರೆ. ಪುತ್ತೂರು ಪೋಲಿಸ್ ಠಾಣೆ ಮತ್ತು ಸಿಬ್ಬಂದಿಗಳ ವೇಗದ ಹಾಗೂ ಪರಿಣಾಮಕಾರಿ ಕಾರ್ಯಾಚರಣೆ ಪ್ರಶಂಸನೀಯವಾದುದು ಎಂದು ಸಾರ್ವಜನಿಕರು ಹೇಳಿದ್ದಾರೆ.
ಹಾಗೂ ಇನ್ನು ಯುವತಿಯ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಡಿಸ ಬೇಡಿ ಎಂಬುದಾಗಿ ಮನೆಯವರು ಮನವಿ ಮಾಡಿಕೊಂಡಿದ್ದಾರೆ.