ಹಿಂದೂ ರಿಪಬ್ಲಿಕ್:- ದಿನದಿಂದ ದಿನಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಕೊರಳ ಕುಣಿಕೆ ಬಿಗಿಯಾಗುತ್ತಿದೆ.ಒಂದೆಡೆ ವಕ್ಫ್ ಹಾಗೂ ಮುಡಾ ಹಗರಣದಿಂದ ಕಂಗಾಲಾಗಿರುವ ಸಿದ್ದು ಸರ್ಕಾರಕ್ಕೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಹೌದು ಕಾಂಗ್ರೆಸ್ ಸಚಿವ ಜಮೀರ್ ಅಹಮ್ಮದ್ ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿದ್ದು, ಲೋಕಾಯುಕ್ತ ನೋಟಿಸ್ ನೀಡಿದೆ. ಜೊತೆಗೆ ಡಿಸೆಂಬರ್ 3 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಆದೇಶ ನೀಡಲಾಗಿದೆ. ಈ ಬಗೆಗಿನ ಮಾಹಿತಿ ಇಲ್ಲಿದೆ.
ಇ.ಡಿ ಬಳಿಕ ಲೋಕಾಯುಕ್ತ ಶಾಕ್!
ಈ ಹಿಂದೆ ಇ.ಡಿ ವಿಚಾರಣೆ ಎದುರಿಸುತ್ತಿದ್ದ ಸಚಿವ ಜಮೀರ್ ಅಹಮ್ಮದ್ ಇದೀಗ ಲೋಕಾಯುಕ್ತ ವಿಚಾರಣೆ ಎದುರಿಸಬೇಕಾಗಿದೆ. ಅಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ ಲೋಕಾಯುಕ್ತ ಜಮೀರ್ ಅಹಮ್ಮದ್ ಅವರನ್ನು ಕಳೆದ ಎರಡು ವರ್ಷಗಳಿಂದ ವಿಚಾರಣೆ ನಡೆಸುತ್ತಿದ್ದು, ಡಿಸೆಂಬರ್ 3 ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ.
ಬಯಲಾಗಿತ್ತು 87 ಕೋಟಿ ಅಕ್ರಮ ಆಸ್ತಿ!
ಎರಡು ವರ್ಷಗಳ ಹಿಂದೆ ಸಚಿವ ಜಮೀರ್ ಅಹಮ್ಮದ್ ಖಾನ್ ಹೆಸರಿನಲ್ಲಿದ್ದ ಬರೋಬ್ಬರಿ 87 ಕೋಟಿ ಅಕ್ರಮ ಆಸ್ತಿ ವಿವರ ತನಿಖೆಯಿಂದ ಬಯಲಾಗಿತ್ತು. ಇದೀಗ ರಾಜ್ಯದಲ್ಲಿ ಹಲವು ವಿವಾದಗಳು ಭುಗಿಲೆದ್ದಿರುವ ನಡುವೆ ಮತ್ತೊಮ್ಮೆ ಕಾಂಗ್ರೆಸ್ ಸಚಿವನಿಗೆ ಲೋಕಾಯುಕ್ತ ಶಾಕ್ ನೀಡಿದೆ.