ರಿಪಬ್ಲಿಕ್ ಹಿಂದೂ:- ಕೆಲವರು ಜೀವನಕ್ಕಾಗಿ ಉದ್ಯೋಗವನ್ನು ನಂಬಿದ್ದರೆ ಇನ್ನೂ ಕೆಲವರು ಕೃಷಿಯನ್ನೇ ಅವಲಂಬಿಸಿರುತ್ತಾರೆ. ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಯನ್ನು ನಾನಾ ರೀತಿಯಲ್ಲಿ ಉಪಯೋಗಿಸಲಾಗುತ್ತಿದೆ. ಹಲವಾರು ಆಹಾರ ಉದ್ಯಮಕ್ಕೂ ಇದು ಉತ್ತೇಜನವನ್ನು ನೀಡುತ್ತಿದೆ. ಅಷ್ಟೇ ಅಲ್ಲದೆ ಅನೇಕ ರೋಗಗಳ ಶಮನಕ್ಕೂ ಇದು ಔಷಧಿಯಂತೆ ಕೆಲಸ ನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ಎಲ್ಲದರ ಮಧ್ಯೆ ಇದೀಗ ಶಾಕಿಂಗ್ ವಿಚಾರವೊಂದು ಬಯಲಾಗಿದೆ.
*ಅಡಕೆಯಲ್ಲಿದೆ ಕ್ಯಾನ್ಸರ್ ಕಾರಕ ಅಂಶಗಳು....!!*
ವಾಣಿಜ್ಯ ಬೆಳೆಯಾದ ಅಡಕೆಯನ್ನು ಬೆಳೆದು ಸಾಕಷ್ಟು ಲಾಭ ಗಳಿಸುವ ಅದೆಷ್ಟೋ ಬೆಳೆಗಾರರಿಗೆ ವಿಶ್ವ ಆರೋಗ್ಯ ಸಂಸ್ಥೆ ಅಚ್ಚರಿಕರ ಸಂಗತಿಯನ್ನು ಬಯಲು ಮಾಡಿದೆ. ಹೌದು..ಅಡಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇರುವುದು ಪತ್ತೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯೊಂದು ಅಡಕೆ ಬಳಕೆ ನಿಯಂತ್ರಿಸಿದರೆ ವಿಶ್ವದಲ್ಲಿ ಬಾಯಿ ಕ್ಯಾನ್ಸರ್ ಪ್ರಮಾಣವನ್ನು ಬಹುತೇಕವಾಗಿ ನಿಯಂತ್ರಿಸಬಹುದು ಎಂದು ಇತ್ತೀಚೆಗೆ ವರದಿ ನೀಡಿದೆ. ಈ ವರದಿಯು ಅಡಕೆ ಬಳಕೆ ಮೇಲೆ ನಿಯಂತ್ರಣ ಹೇರುವ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಇದೀಗ ತಂಬಾಕು ಮಾದರಿಯಲ್ಲೇ ಅಡಕೆ ಬೆಳೆ ನಿಯಂತ್ರಣ ಉಪಕ್ರಮಗಳಿಗೂ ಕಾರಣವಾಗುವ ಆತಂಕ ಬೆಳೆಗಾರರಲ್ಲಿ ಮೂಡಿದೆ.
*ಅಡಕೆ ಬೆಳೆ ನಿಯಂತ್ರಣಕ್ಕೆ ಶಿಫಾರಸ್ಸು, ಬೆಳೆಗಾರರಲ್ಲಿ ಹೆಚ್ಚಾದ ಆತಂಕ...!!*
ಅಡಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿರುವುದರಿಂದ ಅದನ್ನು ಕಡೆಗಣಿಸುವುದು ಸರಿಯಲ್ಲ. ತಂಬಾಕು ಮಿಶ್ರಿತ ಅಡಕೆ ಸಹಿತ ಸಂಪೂರ್ಣವಾಗಿ ಅಡಕೆ ಬೆಳೆಯನ್ನು ನಿಯಂತ್ರಿಸುವ ಪ್ರಸ್ತಾಪಗಳು, ಚರ್ಚೆಗಳು ನಡೆಯುತ್ತಲೇ ಇದೆ. ಬಿಡುಗಡೆಯಾದ ಐಎಆರ್ ಸಿ ವರದಿಯ ಪ್ರಕಾರ ಹೊಗೆ ರಹಿತ ತಂಬಾಕು ಮತ್ತು ಅಡಕೆ ಬಳಕೆಗೆ ಕಡಿವಾಣ ಹಾಕುವ ಮೂಲಕ ವಿಶ್ವದ ಮೂರನೇ ಒಂದರಷ್ಟು ಬಾಯಿ ಕ್ಯಾನ್ಸರ್ ತಡೆಯಬಹುದು ಎಂಬ ವರದಿಯಲ್ಲಿ ಹೇಳಲಾಗಿದೆ. ಆದ್ದರಿಂದ ಇದೀಗ ಅಡಕೆ ಬೆಳೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಪ್ರಸ್ತಾಪ ಕೇಂದ್ರ ಸರ್ಕಾರದ್ದು. ಇದರಿಂದ ಅಡಕೆ ಬೆಳೆಯನ್ನೇ ಜೀವನಕ್ಕೆ ಆಧಾರವೆಂದು ನಂಬಿದ್ದ ಅದೆಷ್ಟೋ ಬೆಳೆಗಾರರ ಕುಟುಂಬ ಮಾತ್ರ ಅಲ್ಲೋಲ ಕಲ್ಲೋಲವಾಗಿ ಅತಂತ್ರದ ಪರಿಸ್ಥಿತಿಯಲ್ಲಿ ಸಿಕ್ಕಿ ಬೀಳೋದು ಮಾತ್ರ ಖಂಡಿತ...