ಈಶ್ವರಮಂಗಲ - ನೆಟ್ಟಣಿಗೆಮಡ್ನೂರ್ ಗ್ರಾಮದಲ್ಲಿ ಸರಕಾರಿ ಭೂಮಿಯ ಅತಿಕ್ರಮಣ; ಆಕ್ರೋಶಿತ ಗ್ರಾಮಸ್ಥರಿಂದ ಅಧಿಕಾರಿಗಳಿಗೆ ತರಾಟೆ!!!

  • 28 Nov 2024 08:29:43 PM

ಈಶ್ವರಮಂಗಲ: ನೆಟ್ಟಣಿಗೆ ಮುಡ್ನೂರು ಗ್ರಾಮದ ಸುರುಳಿಮೂಲೆ ಎಂಬಲ್ಲಿ ಸರಕಾರಿ ಭೂಮಿಯ ಅತಿಕ್ರಮಣದ ವಿರುದ್ಧ ಸ್ಥಳೀಯ ಗ್ರಾಮಸ್ಥರು ಕಂದಾಯ ಇಲಾಖೆ ಅಧಿಕಾರಿಗಳನ್ನು ಮತ್ತು ಪಂಚಾಯತ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

 

  ತಕ್ಷಣವೇ ಅತಿಕ್ರಮಣ ಮುಕ್ತಗೊಳಿಸ ಬೇಕೆಂದು ಸಾರ್ವಜನಿಕರು ಅಧಿಕಾರಿಗಳನ್ನು ಒತ್ತಾಯಿಸಿದರು. ಕಂದಾಯ ನಿರೀಕ್ಷಕರು ಪಂಚಾಯತ್ ಪಿಡಿಓ ಪಂಚಾಯತ್ ಸದಸ್ಯರು ಹಾಗು ರೈತ ಸಂಘದ ಜಿಲ್ಲಾಮಟ್ಟದ ನಾಯಕರು ಜೊತೆಗಿದ್ದರು.

ಈ ಘಟನೆಯಿಂದ ಗ್ರಾಮದಲ್ಲಿ ಆಕ್ರೋಶದ ವಾತಾವರಣ ಉಂಟಾಗಿದೆ.

ನಾಳೆ, ದಿನಾಂಕ 29/11/2024 ರಂದು ಜಂಟಿ ಸರ್ವೆ ನಡೆಸಲು ಕಂದಾಯ ಇಲಾಖೆ ನಿರ್ಣಯಿಸಿದೆ.