ಮಹಾಕುಂಭ ಮೇಳದಲ್ಲಿ ಆಪಲ್ ಕಂಪನಿಯ ಮಾಲೀಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಕೇಸರಿ ಧರಿಸಿ ಹೆಸರು ಬದಲಿಸಿದ್ದೇಕೆ?

  • 13 Jan 2025 01:04:23 AM

ಉತ್ತರ ಪ್ರದೇಶ: ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳ (Mahakumbh Mela 2025) ಗೆ ಕೌಂಟ್‌ಡೌನ್ ಶುರುವಾಗಿದೆ. ನಾಳೆಯಿಂದ ಲಕ್ಷಾಂತರ ಜನರ ಸಮ್ಮುಖದಲ್ಲಿ ಈ ಮಹಾ ಧಾರ್ಮಿಕ ಸಪ್ತಾಹ ನಡೆಯಲಿದೆ. ವಿಶಿಷ್ಟ ಆಕರ್ಷಣೆಗಳೊಂದಿಗೆ ಜನ ಮನಗಳ ಗಮನ ಸೆಳೆಯಲಿದೆ.

 

ಈ ವರ್ಷದ ಮಹಾಕುಂಭ ಮೇಳದ ವಿಶೇಷ ವಿಷಯವೇನೆಂದು ಗೊತ್ತೇ???. ಉತ್ತರ ಪ್ರದೇಶದ ದಾರ್ಮಿಕ ನಗರದಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ ಜಗತ್ಪ್ರಸಿದ್ಧ ಆಪಲ್ ಕಂಪನಿಯ ಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಅವರು ಭಾಗವಹಿಸಲಿದ್ದಾರೆ. ಭಾನುವಾರ ಲಾರೆನ್ ಅವರು ಕುಂಭಮೇಳದ ನೆಲಕ್ಕೆ ಆಗಮಿಸಲಿದ್ದು, ಕಲ್ಪವಾಸ ವ್ರತವನ್ನು ಆಚರಿಸಲಿದ್ದಾರೆ ಎಂದು ತಿಳಿದು ಬಂದಿದೆ.

 

ಕುಂಭಮೇಳಕ್ಕೆ ತಲುಪುವ ಮೊದಲೇ ಲಾರೆನ್ ಅವರು ಕೇಸರಿ ಬಣ್ಣದ ವಸ್ತ್ರವನ್ನು ಧರಿಸಿದ್ದು, ತಮ್ಮ ಹೆಸರನ್ನೂ ಬದಲಾಯಿಸಿಕೊಂಡಿದ್ದಾರೆ ಎನ್ನುವುದೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗಿದೆ. 

 

ಅವರು ಗುರು ನಿರಂಜನಿ ಪೀಠಾಧೀಶ್ವರ ಮಹಂತ್ ಕೈಲಾಶಾನಂದ ಗಿರಿ ಅವರಿಂದ ತನ್ನ ಗೋತ್ರವನ್ನು ನೀಡಿದ ನಂತರ, ಕಮಲಾ ಎಂಬ ಹೊಸ ಹೆಸರನ್ನು ಪಡೆದಿದ್ದಾರೆ. ಪಾಶ್ಚಾತ್ಯ ಉಡುಗೆ ಬಿಟ್ಟು ಸನ್ಯಾಸಿ ಧಾರ್ಮಿಕ ವಸ್ತ್ರದಲ್ಲಿ ಲಾರೆನ್ ಅವರು ಕಾಣಿಸಿಕೊಂಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.