ಭ್ರಷ್ಟಚಾರದಲ್ಲಿ ತೊಡಗಿರುವ ಸಕಲೇಶಪುರ ತಹಸೀಲ್ದಾ‌ರ್ ಮೇಘನರವರ ವಿರುದ್ಧ ಸರಿಯಾದ ಕ್ರಮಕೈಗೊಳ್ಳಬೇಕು, ಇಲ್ಲವಾದಲ್ಲಿ ಉಗ್ರವಾಗಿ ಪ್ರತಿಭಟನೆ ನಡೆಸುತ್ತೇವೆ - ಶಿವು ಜಿಪ್ಪಿ!

  • 27 Jan 2025 04:07:15 PM

ಸಕಲೇಶಪುರ: ತಹಸೀಲ್ದಾರ್ ಮೇಘನಾ ಅವರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿ ಬಂದಿದ್ದು, ಕ್ಷೇತ್ರದಲ್ಲಿ ಈ ವಿಚಾರವಾಗಿ ತೀವ್ರ ಚರ್ಚೆಗೆ ಕಾರಣವಾಗಿದೆ. ಆಡಳಿತ ಕೋರ್ಟಿನಿಂದ ಹಿಡಿದು ಧಾರ್ಮಿಕ ಕಾರ್ಯಕಲಾಪಗಳಲ್ಲಿ ಅವರ ನಿರ್ಲಕ್ಷ್ಯ ಮತ್ತು ಅಧಿಕಾರ ದುರುಪಯೋಗದ ಆರೋಪ ಕೇಳಿಬಂದಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲು ಹಲವಾರು ಮನವಿಗಳು ಮಾಡಿದರೂ ಸಹ ಈ ಸಂಬಂಧವಾಗಿ ಯಾವುದೇ ಸ್ಪಷ್ಟತೆ ಅಥವಾ ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕ ಮತ್ತು ಹಿಂದೂ ಸಂಘಟನೆಗಳಲ್ಲಿ ಆಕ್ರೋಶವನ್ನುಂಟು ಮಾಡಿದೆ.

 

• ರಥೋತ್ಸವಕ್ಕೆ ಸಂಬಂಧಿಸಿದ ಪೋಸ್ಟ್ ಹಾಗೂ ಅಧಿಕಾರ ದುರುಪಯೋಗ:

 

ಸಕಲೇಶ್ವರ ಸ್ವಾಮಿ ದೇವಾಲಯದ ರಥೋತ್ಸವದ ಸಂದರ್ಭದಲ್ಲಿ, 2023 ಸೆಪ್ಟೆಂಬರ್ 21ರಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಹೇಶ್ ಅವರು ತಹಸೀಲ್ದಾರ್ ಮೇಘನ ಮತ್ತು ಉಪವಿಭಾಗಾಧಿಕಾರಿಗಳ ಹೆಸರಿನಲ್ಲಿ ಸಮಾಜದ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ. ಇದು ಅಧಿಕಾರದ ದುರುಪಯೋಗವಾಗಿದ್ದು, ಸಾಮಾಜಿಕ ಜಾಲತಾಣಗಳನ್ನು ಪ್ರಚೋದಿಸುವುದರ ಮೂಲಕ ಶಿಷ್ಟಾಚಾರವನ್ನು ಉಲ್ಲಂಘಿಸಲಾಗಿದೆ. ಈ ಪೋಸ್ಟ್ ಮೇಲೆ ಪ್ರತಿಕ್ರಿಯಿಸುತ್ತಾ, ಹಿಂದೂ ಕಾರ್ಯಕರ್ತರು ತಹಸೀಲ್ದಾರ್ ಮೇಘನ ವಿರುದ್ಧ ತಕ್ಷಣ ಕ್ರಮಕೈಗೊಳ್ಳಲು ವಿವಿಧ ದೂರುಗಳನ್ನು ಸಲ್ಲಿಸಿದ್ದಾರೆ. ಆದರೆ, ನಾಲ್ಕು ತಿಂಗಳಿನಿಂದ ಯಾವುದೇ ರೀತಿಯ ಕ್ರಮಕೈಗೊಳ್ಳಲಿಲ್ಲ.

 

• ಗಡಿ ಚೌಡೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವದ ಅರ್ಜಿಗಳನ್ನು ತಿರಸ್ಕರಿಸುವುದು:

 

ಶ್ರೀ ಗಡಿ ಚೌಡೇಶ್ವರಿ ದೇವಸ್ಥಾನದ ಆಡಳಿತವು ಬಹುಪ್ರಸಿದ್ಧವಾದುದು ಮತ್ತು ದೇವಾಲಯಕ್ಕೆ ಲಕ್ಷಾಂತರ ರೂಪಾಯಿಯ ಆದಾಯವಿದೆ. ಎರಡು ವರ್ಷಗಳಿಂದ, ಗಡಿದೇವಾಲಯದ ಬ್ರಹ್ಮಕಲಶೋತ್ಸವಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಸಕಲೇಶಪುರ ತಹಸೀಲ್ದಾರ್ ಆದ ಮೇಘನ ಅವರು ನಿರಾಕರಿಸಿರುವುದನ್ನು ಕಾರ್ಯಕರ್ತರು ಹಾಗೂ ಭಕ್ತರು ಖಂಡಿಸಿದ್ದಾರೆ. ಹಲವಾರು ಬಾರಿ ಅರ್ಜಿಗಳನ್ನು ಸಲ್ಲಿಸಿದರೂ ಅದಕ್ಕೆ ಯಾವುದೇ ಪರಿಗಣನೆಯಿಲ್ಲ.

 

• 94 ಸಿ ಅಡಿಯಲ್ಲಿ ಹಕ್ಕುಪತ್ರಗಳನ್ನು ನೀಡದಿರುವುದು:

 

94 ಸಿ ಅಡಿಯಲ್ಲಿ ಸರ್ಕಾರದಿಂದ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ನೀಡುವ ಪ್ರಕ್ರಿಯೆಯಲ್ಲಿ ತಹಸೀಲ್ದಾರ್ ಮೇಘನ ನಿರ್ಲಕ್ಷ್ಯ ಮನೋಭಾವವಿದ್ದು, ದಾಖಲಾತಿಗಳನ್ನು ಸರಿಯಾಗಿ ಪರಿಶೀಲಿಸದೆ, ಅನೇಕ ಅರ್ಜಿದಾರರನ್ನು ವಂಚಿಸುತ್ತಿದ್ದಾರೆ. 

• ಅನಾವೃಷ್ಟಿ ಮತ್ತು ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶಗಳಿಗೆ ಪರಿಹಾರವಿಲ್ಲ:

2024ರಲ್ಲಿ ಮಳೆ ಪ್ರಮಾಣದಲ್ಲಿ ಹೆಚ್ಚುವರಿ ಹಾನಿಯಾಗಿದೆ, ಆದರೆ ತಹಸೀಲ್ದಾರ್ ಮೇಘನ ಅವರು ಸ್ಥಳ ಪರಿಶೀಲನೆ ನಡೆಸದೇ, ಅನಾವೃಷ್ಟಿ ಅಥವಾ ಅತಿವೃಷ್ಟಿಯ ಹಾನಿಯಿಂದ ತತ್ತರಿಸಿದ ಪ್ರದೇಶಗಳಿಗೆ ಸರಿಯಾದ ಪರಿಹಾರವನ್ನು ನೀಡಲು ವಿಫಲರಾಗಿದ್ದಾರೆ. ಹಾನಿಯಾದ ಪ್ರದೇಶಗಳ ಅವಲೋಕನವನ್ನು ಸರಿಯಾಗಿ ನಡೆಸದೇ, ಅಪಾರಷ್ಟು ಅಲ್ಪ ಪರಿಹಾರವನ್ನು ನೀಡಿರುವುದರಿಂದ ಸ್ಥಳೀಯರ ಆಕ್ರೋಶ ಹೆಚ್ಚಾಗಿದೆ.

 

• ಅತಿವೃಷ್ಟಿಯಿಂದ ಹೊಳೆನರಸಿಪುರದಲ್ಲಿ 2019 ರಲ್ಲಿ ನಡೆದ ಗುಂಡು, ತುಂಡಿನ ಪಾರ್ಟಿ ಘಟನೆಯಲ್ಲಿಯೂ ಸಕಲೇಶಪುರ ತಹಸೀಲ್ದಾರ್ ಮೇಘನರವರ ಭಾಗವಹಿಸಿದ್ದಾರೆ ಎಂದು ಸುದ್ದಿಯಾಗಿದೆ. ಈ ಹಿನ್ನೆಲೆಯಲ್ಲಿ, ಮೇಘನ ವಿರುದ್ಧ ನಿಖರ ತನಿಖೆ ನಡೆಸಲು ಪ್ರಾಧಿಕಾರಿಗಳಿಗೆ ಆಗ್ರಹಿಸಲಾಗಿದೆ. ಈ ಬಗ್ಗೆ ಈಗಾಗಲೇ ಕಂದಾಯ ಇಲಾಖೆಗೆ ದೂರು ನೀಡಿದ್ದು, ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುತ್ತಿದ್ದೇವೆ. ಮತ್ತೂ ಈ ರೀತಿಯ ಅಧಿಕಾರಿಗಳು ಸಕಲೇಶಪುರಕ್ಕೆ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

 

ಭ್ರಷ್ಟಾಚಾರದಲ್ಲಿ ತೊಡಗಿರುವ ಸಕಲೇಶಪುರ ತಹಸೀಲ್ದಾರ್ ಮೇಘನ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ನಾವು ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಶಿವು ಜಿಪ್ಪಿ ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.