ಪೈವಳಿಕೆ ಪಂಚಾಯತ್ ನಲ್ಲಿ ಹಣಕಾಸು ಸಮಿತಿಯ ಅನುಮತಿ ಇಲ್ಲದೆ ಬಿಲ್ ಪಾವತಿ: ಬಿಜೆಪಿ ಸದಸ್ಯರಿಂದ ಬೋರ್ಡ್ ಸಭೆ ಬಹಿಷ್ಕಾರ

  • 30 Oct 2024 03:06:28 PM

ಪೈವಳಿಕೆ: ಪೈವಳಿಕೆ ಗ್ರಾಮಪಂಚಾಯತ್ ನಲ್ಲಿ ನಡೆಯುವ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಉದ್ಯೋಗಸ್ಥರ ಕೊರತೆಯನ್ನು ಖಂಡಿಸಿ, ಇಂದು ನಡೆಯಬೇಕಿದ್ದ ಬೋರ್ಡ್ ಸಭೆಯನ್ನು ಬಿಜೆಪಿ ಜನಪ್ರತಿನಿಧಿಗಳು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ದಾರಿದೀಪ ಕಾಮಗಾರಿಗೆ ಮೀಸಲಾಗಿದ್ದ 32 ಲಕ್ಷ ರೂಪಾಯಿಗಳನ್ನು ಫೈನಾನ್ಸ್ ಸಮಿತಿಯ ಗಮನಕ್ಕೆ ತಂದಿಲ್ಲದೆ ಗುತ್ತಿಗೆದಾರನಿಗೆ ಪಾವತಿಸಿದ ಭ್ರಷ್ಟಾಚಾರವನ್ನು ಖಂಡಿಸಿ, ಪೈವಳಿಕೆ ಪಂಚಾಯತ್‌ನ ಬಿಜೆಪಿ ಜನಪ್ರತಿನಿಧಿಗಳು ಬೋರ್ಡ್ ಸಭೆಯನ್ನು ಬಹಿಷ್ಕರಿಸಿದ್ದಾರೆ.ದಾರಿದೀಪ ಕಾಮಗಾರಿಗೆ ಮೀಸಲಾಗಿದ್ದ 32 ಲಕ್ಷ ರೂಪಾಯಿಗಳನ್ನು ಫೈನಾನ್ಸ್ ಸಮಿತಿಯ ಗಮನಕ್ಕೆ ತಂದಿಲ್ಲದೆ ಗುತ್ತಿಗೆದಾರನಿಗೆ ಪಾವತಿಸಿದ ಭ್ರಷ್ಟಾಚಾರವನ್ನು ಖಂಡಿಸಿ, ಪೈವಳಿಕೆ ಪಂಚಾಯತ್‌ನ ಬಿಜೆಪಿ ಜನಪ್ರತಿನಿಧಿಗಳು ಬೋರ್ಡ್ ಸಭೆಯನ್ನು ಬಹಿಷ್ಕರಿಸಿದ್ದಾರೆ.

ಅಲ್ಲದೇ ಕೂಡಲೇ ಕಾರ್ಯದರ್ಶಿಯ ನೇಮಕದ ಜೊತೆಗೆ ಪಂಚಾಯತ್ ನಲ್ಲಿ ಉದ್ಯೋಗವಿರುವ AE , ಕ್ಲಾರ್ಕ್ ಗಳ ಅಭಾವಗಳ ಬಗ್ಗೆ ಕೂಡಲೇ ನೇಮಕಾತಿ ಮಾಡಬೇಕೆಂದು ಸದಸ್ಯರು ಅಗ್ರಹ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಜನಪ್ರತಿನಿಧಿಗಳು ಹಾಗೂ ನೇತಾರರಾದ ಮಾಜಿ ಪಂಚಾಯತ್ ಅಧ್ಯಕ್ಷರಾದ ಮಣಿಕಂಠ ರೈ, ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ ಮುಖಂಡರಾದ ಲೋಕೇಶ್ ನೋಂಡ, ಸದಾಶಿವ ಚೇರಾಲ್, ಪ್ರವೀಣ್ ಚಂದ್ರ ಬಲ್ಲಾಳ್, ಸತ್ಯ ಶಂಕರ್ ಭಟ್, ಕೀರ್ತಿ ಭಟ್ ಮೊದಲಾದವರು ಘಟನೆಯನ್ನು ಖಂಡಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ.