ಐಪಿಎಲ್ ಹರಾಜಿನಲ್ಲಿ ಇತಿಹಾಸ ಸೃಷ್ಟಿಸಿದ 13 ವರ್ಷದ ಸೂರ್ಯವಂಶಿ!; ಈತನನ್ನು ಕೋಟಿ ಕೊಟ್ಟು ಖರೀದಿಸಿದ ತಂಡ ಯಾವುದು ಗೊತ್ತಾ????

  • 28 Nov 2024 12:54:26 PM

ಸೌದಿಅರೇಬಿಯಾ, ಐಪಿಎಲ್ 2025: ಬಿಹಾರ ಮೂಲದ ಕ್ರಿಕೆಟರ್ ಕೇವಲ 13 ವರ್ಷದ ವೈಭವ್ ಸೂರ್ಯವಂಶಿ ಈ ಬಾರಿಯ ಐಪಿಎಲ್ ಮೆಗಾ ಹರಾಜಿನ ಕೇಂದ್ರ ಬಿಂದುವಾಗಿದ್ದರು.ಐಪಿಎಲ್ ಇತಿಹಾಸದಲ್ಲೇ ಇಷ್ಟು ಚಿಕ್ಕ ವಯಸ್ಸಿನ ಆಟಗಾರನಿಗೆ ಹರಾಜಿನಲ್ಲಿ ಅವಕಾಶ ಲಭಿಸಿದ್ದು ಇದೇ ಮೊದಲು. ಇದಿಷ್ಟು ಸಾಲದು ಎಂಬಂತೆ ಇದೀಗ ಸೂರ್ಯವಂಶಿಯನ್ನು ಕೋಟಿ ಬೆಲೆ ಕೊಟ್ಟು ಐಪಿಎಲ್ ನ ಪ್ರತಿಷ್ಠಿತ ತಂಡ ಖರೀದಿ ಮಾಡಿದೆ.

 

ಕೋಟಿಗೆ ಬಿಕರಿಯಾದ ಸೂರ್ಯವಂಶಿ!

 

5ನೇ ವಯಸ್ಸಿ ಕ್ರಿಕೆಟ್ ಮೈದಾನಕ್ಕಿಳಿದ ವೈಭವ್ ಬಲು ಬೇಗನೆ ಚೆಂಡು ದಾಂಡಿನ ಆಟದಲ್ಲಿ ಪಳಗಿ ಬಿಟ್ಟರು. 12ನೇ ವಯಸ್ಸಿಗೆ ಪ್ರಥಮ ದರ್ಜೆ ಹಾಗೂ ಅಂಡರ್ 19 ತಂಡದಲ್ಲಿ ಗುರುತಿಸಿಕೊಂಡರು. ಇದೀಗ ವೈಭವ್ ಅವರನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ 1.1ಕೋಟಿಗೆ ಖರೀದಿ ಮಾಡಿದೆ. ಈ ಮೂಲಕ ಐಪಿಎಲ್‌ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣವಾಗಿದೆ.

 

ಸೂರ್ಯವಂಶಿ ಕ್ರಿಕೆಟ್ ಹಿಸ್ಟರಿ!

 

5ನೇ ವಯಸ್ಸಿಗೆ ಕ್ರಿಕೆಟ್ ಆಡಲು ಆರಂಭಿಸಿದ ವೈಭವ್ ಸೂರ್ಯವಂಶಿ 2023ರಲ್ಲಿ ಮೊದಲ ಬಾರಿಗೆ ರಣಜಿಗೆ ಅರ್ಹತೆ ಪಡೆದರು. ಆ ಬಳಿಕ ಆಡಿದ ಅಂಡರ್-19 ಪಂದ್ಯದಲ್ಲಿ ತ್ರಿಶತಕ ಬಾರಿಸಿ ದಾಖಲೆ ನಿರ್ಮಿಸಿದ್ದರು. ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ಅಂಡರ್-19 ಪಂದ್ಯದಲ್ಲಿ 64 ಎಸೆತಗಳಲ್ಲಿ 104 ರನ್ ಬಾರಿಸಿ ಇತಿಹಾಸ ನಿರ್ಮಿಸಿದರು. ಇಂತಹ 13 ವರ್ಷದ ಕ್ರಿಕೆಟ್ ಕಲಿ ಇದೀಗ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದು, ಐಪಿಎಲ್ ನಲ್ಲಿ ಸೂರ್ಯವಂಶಿ ಪ್ರದರ್ಶನ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.