ಈ ರೀತಿ ಎಕ್ಸ್ ಖಾತೆ ತೆರೆದು ಕನ್ನಡಿಗರನ್ನು ಕೆಣಕಿದ RCB!;ಬಾಯಿಗೆ ಬಂದಂತೆ ಉಗಿದ ಫ್ಯಾನ್ಸ್!

  • 29 Nov 2024 12:41:53 PM

ಹಿಂದೂ ರಿಪಬ್ಲಿಕ್ :- ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐ.ಪಿ.ಎಲ್ ನಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು‌ ಹೊಂದಿರುವ RCB ತಂಡ ಇದೀಗ ಈ ರೀತಿ ತನ್ನ ಅಧಿಕೃತ ಎಕ್ಸ್ ಖಾತೆ ತೆರೆದು ಕನ್ನಡಿಗರನ್ನು‌ ಕೆಣಕಿದೆ‌. RCB ನಡೆಯಿಂದ ಕೆಂಡಾಮಂಡಲವಾದ ಅಭಿಮನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.ಹಾಗಿದ್ರೆ RCB ಮಾಡಿದ ತಪ್ಪೇನು?. ಇಲ್ಲಿದೆ ನೋಡಿ ಕಂಪ್ಲೀಟ್ ಡೀಟಿಯಲ್ಸ್.

 

ಹಿಂದಿಯಲ್ಲಿ ಎಕ್ಸ್ ಖಾತೆ ತೆರೆದ RCB!

 

ಇತ್ತೀಚೆಗೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ಸಿಬಿ ಹೊಸ ಆಟಗಾರರನ್ನು ಖರೀದಿ ಮಾಡಿತ್ತು. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ತನ್ನ ಹೊಸ ಅಧಿಕೃತ ಎಕ್ಸ್ ಖಾತೆಯಲ್ಲಿ ಆಟಗಾರರಿರುವ ಫೋಟೋವನ್ನು ಹಿಂದಿ ಭಾಷೆಯೊಂದಿಗೆ ಫೋಸ್ಟ್ ಮಾಡಿತ್ತು. ಇದರಿಂದ ಆರ್ಸಿಬಿ ಅಭಿಮಾನಿಗಳು ಹಾಗೂ ಕನ್ನಡಿಗರು ಕೆಂಡಾಮಂಡಲವಾಗಿದ್ದಾರೆ.

 

ಆಕ್ರೋಶ ಹೊರ ಹಾಕಿದ ಕನ್ನಡಿಗರು!

 

ಆರ್ಸಿಬಿ ಹಿಂದಿ ಭಾಷೆಯಲ್ಲಿ ಎಕ್ಸ್ ಖಾತೆ ತೆರೆದ ತಕ್ಷಣ ಎಚ್ಚೆತ್ತುಕೊಂಡ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ, 'ನಾವು ನಿಮಗೆ ಬೆಂಬಲ ಕೊಡುತ್ತಿರುವುದು ಬೆಂಗಳೂರು ಅನ್ನುವ ಹೆಸರಿಗೆ. ನಮ್ಮ ತಂಡ ಎಂದು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಅಭಿಮಾನಿಗಳಿಗೆ, ಕನ್ನಡಿಗರಿಗೆ ದ್ರೋಹ ಬಗೆಯಬೇಡಿ. ನಮಗೆ ಕ್ರಿಕೆಟ್‌ಗಿಂತ ಕನ್ನಡ ಮುಖ್ಯ. ಆರ್ಸಿಬಿಯಲ್ಲಿ ಕನ್ನಡ ಹಾಗೂ ಕನ್ನಡಿಗರಿಗೆ ಪ್ರಾಮುಖ್ಯತೆ ನೀಡಿ' ಎಂದು ಬರೆದುಕೊಂಡಿದ್ದಾರೆ‌.