ಇಡೀ‌ ಜಗತ್ತಿನಲ್ಲಿ‌ ನಿಮ್ಮಂತಹ‌ ಅಭಿಮಾನಿಗಳು ಯಾರೂ‌‌ ಇಲ್ಲ!; RCB ಅಭಿಮಾನಿಗಳಿಗೆ ಪತ್ರ ಬರೆದ ಮೊಹಮ್ಮದ್ ಸಿರಾಜ್!

  • 29 Nov 2024 01:02:02 PM

ಹಿಂದೂ ರಿಪಬ್ಲಿಕ್ :- ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಐಪಿಎಲ್ ನಲ್ಲಿ 17 ವರ್ಷಗಳಿಂದ ಒಂದೇ ಒಂದು ಬಾರಿಯೂ ಕಪ್ ಗೆಲ್ಲದಿದ್ದರೂ ಕೂಡ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಏಕೈಕ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಪ್ರತಿಯೊಬ್ಬ ಅಭಿಮಾನಿಯೂ ಕೂಡ RCB ತಂಡದೊಂದಿಗೆ ಭಾವನಾತ್ಯಕ ಸಂಬಂಧ ಹೊಂದಿದ್ದಾನೆ. ಅದೇ ರೀತಿ RCB ಆಟಗಾರರೂ ಕೂಡ ಅಭಿಮಾನಿಗಳನ್ನು ಪ್ರೀತಿಸುತ್ತಾರೆ. ಇದೀಗ 2018 ರಿಂದ RCB ತಂಡದ ಪ್ರಮುಖ ಬೌಲರ್ ಆಗಿದ್ದ ಮೊಹಮ್ಮದ್ ಸಿರಾಜ್ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಗುಜರಾತ್ ಪಾಲಾಗಿದ್ದು,RCB ಅಭಿಮಾನಿಗಳಿಗೆ ತಮ್ಮ ಭಾವುಕ ಪತ್ರ ಬರೆದುಕೊಂಡಿದ್ದಾರೆ‌. ಆ ಬಗೆಗಿನ ಮಾಹಿತಿ ಇಲ್ಲಿದೆ‌.

ಸಿರಾಜ್ ಬರೆದ ಪತ್ರದಲ್ಲೇನಿದೆ?

ಸದ್ಯ, ಐಪಿಲ್ ಮೆಗಾ ಹರಾಜಿಲ್ಲಿ 12.5ಕೋಟಿ ಬೆಲೆಗೆ ಗುಜರಾತ್ ಪಾಲಾಗಿರುವ ಮೊಹಮ್ಮದ್ ಸಿರಾಜ್ ತನ್ನ ಹಳೆಯ ತಂಡ RCB ಗೆ ಭಾವುಕ ಪತ್ರ ಬರೆದಿದ್ದಾರೆ. 

'ನನ್ನ ಪ್ರೀತಿಯ RCB ಅಭಿಮಾನಿಗಳಿಗೆ, RCB ಜೊತೆಗಿನ 7 ವರ್ಷಗಳು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ದಿನಗಳು. ನಾನು ಮೊದಲು RCB ಜರ್ಸಿಯನ್ನು ಧರಿಸಿದಾಗ, ಇಂತಹದೊಂದು ಬಂಧ ಅರಳುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಅಲ್ಲದೆ ನಾನು RCB ಪರ ಕಣಕ್ಕಿಳಿದು ಎಸೆದ ಮೊದಲ ಎಸೆತ, ತೆಗೆದುಕೊಂಡ ಪ್ರತಿ ವಿಕೆಟ್, ಆಡಿದ ಪ್ರತಿ ಪಂದ್ಯ, ನಿಮ್ಮೊಂದಿಗೆ ಹಂಚಿಕೊಂಡ ಪ್ರತಿ ಕ್ಷಣ ಎಲ್ಲವೂ ಅನುಪಮವಾಗಿದೆ.

ನಿಮ್ಮ ಪ್ರೀತಿಯಲ್ಲಿ‌ ಕಳೆದುಹೋಗಿ ನನ್ನಿಂದಾಗುವ ಎಲ್ಲವನ್ನೂ ತಂಡಕ್ಕೆ ನೀಡಿದ್ದೇನೆ. ಏಕೆಂದರೆ ನೀವು ನನ್ನ ಹಿಂದೆಯೇ ಇದ್ದೀರಿ ಎಂದು ನನಗೆ ತಿಳಿದಿತ್ತು. ನೀವು ನೀಡಿದ ಬೆಂಬಲ ಮತ್ತು ಪ್ರೀತಿಯಿಂದಲೇ ನಾನು ಮತ್ತಷ್ಟು ಉತ್ತಮ ಪ್ರದರ್ಶನ ನೀಡುವಂತೆ ಮಾಡುತ್ತಿತ್ತು. ನಾವು ಸೋತಾಗ, ನೀವು ಕಣ್ಣೀರು ಹಾಕುವುದನ್ನು,ನಾವು ಗೆದ್ದಾಗ ನಿಮ್ಮ ಸಂಭ್ರಮಗಳಿಗೆ ನಾನು ಕಂಡಿದ್ದೇನೆ. ನಿಜವಾಗಿಯೂ ಹೇಳುತ್ತಿದ್ದೇನೆ *'ಇಡೀ ಜಗತ್ತಿನಲ್ಲಿ ನಿಮ್ಮಂತಹ ಅಭಿಮಾನಿಗಳು ಬೇರೆ ಯಾರೂ ಇಲ್ಲ*