ಕರಾವಳಿ ಯುವಕನ ಸೆಲೂನ್ ನಲ್ಲಿ ರಿಲ್ಯಾಕ್ಸ್ ಮೂಡ್ ಗೆ ಜಾರಿದ ಕ್ರಿಕೆಟ್ ಕಿಂಗ್ ಕೊಹ್ಲಿ....!!

  • 01 Dec 2024 02:15:53 PM

ಮಂಗಳೂರು : ಸಾಮಾನ್ಯ ಜನರ ಅಂಗಡಿಗೆ, ಅಥವಾ ಮನೆಗೆ ಸೆಲೆಬ್ರಿಟಿಗಳು ಭೇಟಿ ನೀಡುವುದೆಂದರೆ ಅದು ಎಲ್ಲಿಲ್ಲದ ಖುಷಿ ಜೊತೆಗೆ ಅಚ್ಚರಿ.‌ ಅದರಲ್ಲೂ ಮಾಧ್ಯಮದಲ್ಲಿ ಅದು ಸುದ್ದಿಯಾದಾಗ ಮಾತ್ರ ನಮಗೆ ನಮ್ಮ ಮೇಲೆಯೇ ಒಂದು ರೀತಿಯ ಬಿಗುಮಾನ. ಇದೀಗ ನಮ್ಮ ಕರಾವಳಿ ಯುವಕನಿಗೂ ಅಂಥದ್ದೊಂದು ದಿಗ್ಭ್ರಮೆಯಾಗಿದೆ ಏನಂತೀರಾ ..ಈ ಸ್ಟೋರಿ ನೋಡಿ.

 

ಮಂಗಳೂರು ಯುವಕನ ಸೆಲೂನ್ ಗೆ ಎಂಟ್ರಿ ಕೊಟ್ಟ ವಿರಾಟ್ ಕೊಹ್ಲಿ...!!

 

ಆಸ್ಟ್ರೇಲಿಯದಲ್ಲಿ ಕ್ಯಾನ್‌ಬೆರಾದ ಎಂಬುವುದು ಖ್ಯಾತ ಹೇರ್‌ಸ್ಟೈಲಿಂಗ್‌ ಸಲೂನ್‌. ಅಂದ ಹಾಗೆ ಇದು ನಮ್ಮ ಕರಾವಳಿ ಯುವಕನ ಒಡೆತನದಲ್ಲಿರುವ ಸೆಲೂನ್ ಆಗಿದೆ. ಅಲ್ಲಿ ನ. 28ರಂದು ವಿ.ಕೆ ಎಂಬ ಹೆಸರಲ್ಲಿ ಆನ್‌ಲೈನ್‌ ಮೂಲಕ ಮಧ್ಯಾಹ್ನ ಒಂದು ಗಂಟೆಗೆ ಅಪಾಯಿಂಟ್‌ಮೆಂಟ್‌ ನೋಂದಣಿಯಾಗಿತ್ತು. ಆಶ್ಚರ್ಯ ಎಂದರೆ ಸಲೂನ್‌ಗೆ ಬಂದವರು ಬೇರೆ ಯಾರೂ ಅಲ್ಲ, ಭಾರತದ ಖ್ಯಾತ ಕ್ರಿಕಟರ್‌ ವಿರಾಟ್‌ ಕೊಹ್ಲಿ! ಅಲ್ಲಿ ಸೂಪರ್‌ವೈಸರ್‌ ಆಗಿರುವ ಮಂಗಳೂರು ಮೂಲದ ಕಿರಣ್‌ ಕುಮಾರ್‌ ಶ್ರೀನಿವಾಸ್‌ಗೆ ಖುಷಿಯ ಜೊತೆಗೆ ಪರಮಾಶ್ಚರ್ಯ...!

 

ಆತ್ಮೀಯತೆಯಿಂದ ಸಮಯ ಕಳೆದ ಕೊಹ್ಲಿ...,_ಡೌನ್ ಟು ಅರ್ತ್ ಎಂದು ಕೊಂಡಾಡಿದ ಯುವಕ...!!

 

ಸಲೂನ್ ಗೆ ಭೇಟಿ ನೀಡಿ ಸಾಮಾನ್ಯರಂತೆ ಸುಮಾರು ಮುಕ್ಕಾಲು ಗಂಟೆಗಳ ಕಾಲ ಕೊಹ್ಲಿ ಹೇರ್‌ಸ್ಟೈಲಿಂಗ್‌ ಮಾಡಿಸಿಕೊಂಡಿದ್ದಾರೆ. ಕಿರಣ್‌ ಜತೆ ಆತ್ಮೀಯತೆಯಿಂದ ಹರಟಟ ಕೂಡಾ ಹೊಡೆದಿದ್ದಾರೆ. ಸಲೂನ್‌ನಲ್ಲಿದ್ದ ಏಕೈಕ ಭಾರತೀಯ ಅಂದ್ರೆ ಕಿರಣ್‌. ನೀವು ಎಲ್ಲಿಯವರು ಎಂದು ಕೇಳಿದಾಗ, ಕರ್ನಾಟಕದ ಮಂಗಳೂರಿನವನು ಎಂದು ಕಿರಣ್ ಉತ್ತರಿಸಿದ್ದಾರೆ. ಇದು ಗೊತ್ತಾದಾಗ, *ಓಹ್‌ ಮಂಗಳೂರು, ಹಾಗಾದರೆ ಆರ್‌ಸಿಬಿ ಅಭಿಮಾನಿ* ಎಂದು ವಿರಾಟ್ ಸಂತೋಷದಿಂದ ಕೇಳಿದ್ದಾರೆ. ಇಬ್ಬರೂ ಖುಷಿ ಪಟ್ಟು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಬಿಗಿದಪ್ಪಿ ಗೌರವದಿಂದ ನಡೆದುಕೊಂಡಿದ್ದಾರೆ. ಹೀಗೆ ಯಾವುದೇ ಅಹಂಕಾರವಿಲ್ಲದೆ ತನ್ನೊಂದಿಗೆ ಮಾತನಾಡಿದ ಕೊಹ್ಲಿ ಸರಳತೆಗೆ ಕಿರಣ್‌ ಕೂಡ ಫಿದಾ ಆಗಿದ್ದು ಇದು ನಮಗೆ ವಿಶೇಷ ಅನುಭವ. ಇದುವರೆಗೆ ನಮ್ಮ ಸಲೂನ್‌ಗೆ ಈ ರೀತಿ ಖ್ಯಾತನಾಮರು ಬಂದದ್ದಿಲ್ಲ, ಆಸ್ಟ್ರೇಲಿಯದ ಚಿತ್ರತಾರೆಯರು ಬರುತ್ತಿರುತ್ತಾರೆ. ಕೊಹ್ಲಿ ಬಂದು ತೆರಳಿದ್ದು ಮಾತ್ರ ಸಖತ್ ಖುಷಿಯಾಗಿದೆ. ಅವರು ನಮ್ಮ ಸಲೂನ್ ನಲ್ಲಿ ಪರ್ಫ್ಯೂಮ್ ಕೂಡಾ ಖರೀದಿಸಿದ್ದಾರೆ ಎಂದು ಹೇಳಿ ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.