ದುಬೈ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಯ ಗೌರವ ಕಾರ್ಯದರ್ಶಿಯಾದ ಜಯ್ ಶಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಯ ಸ್ವತಂತ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಡಿಸೆಂಬರ್ 1, 2024 ರಂದು ಅವರು ಈ ಹುದ್ದೆಗೆ ಅಧಿಕಾರವನ್ನು ಸ್ವೀಕರಿಸಿಕೊಂಡರು. ಜೈ ಶಾ ಅವರು ಯಾವುದೇ ವಿರೋಧಿ ಅಭ್ಯರ್ಥಿಗಳಿಲ್ಲದೆ ಏಕಮತದಿಂದ ಆಯ್ಕೆಯಾದರು. ಪ್ರಸ್ತುತ ಅಧ್ಯಕ್ಷರಾದ ಗ್ರೀಗ್ ಬಾರ್ಕ್ಲೇ ಅವರು ಮೂರನೇ ಅವಧಿಗೆ ಸ್ಪರ್ಧಿಸದೇ ಇರುವುದರಿಂದ ಅವಿರೋಧವಾಗಿ ಜಯ್ ಶಾ ಅವರು ಅಧಿಕಾರವನ್ನು ಸ್ವೀಕರಿಕೊಂಡರು.
ಇವರು ಜಾಗತಿಕ ಕ್ರಿಕೆಟ್ ಮಂಡಳಿಯಲ್ಲಿ ಭಾರತದ 5 ನೆಯ ಮತ್ತು ಕಿರಿಯ ಅಧಿಕಾರಿಯಾಗಿದ್ದರೆ. ಕಿರಿಯ ಅಧಿಕಾರಿಯಾದ ಜಯ್ ಶಾ ಅವರು ಕೇಂದ್ರ ಸಚಿವ ಅಮಿತ್ ಶಾ ಅವರ ಪುತ್ರನಾಗಿದ್ದಾರೆ.
ಕ್ರಿಕೆಟ್ ಕ್ರೀಡೆಯ ಜಾಗತೀಕರಣ ಹಾಗೂ 2028ರ ಲಾಸ್ ಏಂಜಲೆಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟನನ್ನು ಸೇರಿಸುವುದು ಇವರ ಮುಖ್ಯ ಗುರಿಗಳು ಎಂದು ಹೇಳಿದ್ದಾರೆ.
ಕ್ರಿಕೆಟ್ ನ್ನು ಜಾಗತಿಕವಾಗಿ ವಿಸ್ತರಿಸುವಂತಹ ಅವರ ಯೋಜನೆಗಳು ಮುಂಬರುವ ದಿನಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಯನ್ನು ಇನ್ನು ಹೆಚ್ಚಿಸುತ್ತದೆ.