ಕ್ರಿಕಟ್ ಲೋಕದಲ್ಲೊಂದು ಹೃದಯವಿದ್ರಾವಕ ದುರಂತ!; ಆಟವಾಡುತ್ತಿದ್ದಾಗ ಮೈದಾನದಲ್ಲೇ ಹೃದಯಾಘಾತಕ್ಕೆ ಬಲಿಯಾದ ಕ್ರಿಕೆಟಿಗ!

  • 03 Dec 2024 01:48:00 PM

ಪುಣೆ: ಕ್ರಿಕೆಟ್ ಆಡುತ್ತಿದ್ದಾಗ ಪ್ರತಿಭಾನ್ವಿತ ಕ್ರಿಕೆಟಿಗನೊಬ್ಬ ಮೈದಾನದಲ್ಲೇ ಹೃದಯಾಘಾತದಿಂದ ಉಸಿರು ಚೆಲ್ಲಿದ ಹೃದಯವಿದ್ರಾವಕ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಪುಣೆಯ ಗರ್ವಾರೆ ಕ್ರೀಡಾಂಗಣದಲ್ಲಿ ಈ‌ ಘಟನೆ ನಡೆದಿದ್ದು, ಇಡೀ ಕ್ರಿಕೆಟ್ ಲೋಕವನ್ನೇ ದಂಗಾಗಿಸಿದೆ.

 

ಇಮ್ರಾನ್ ಪಟೇಲ್ ಹೃದಯಾಘಾತಕ್ಕೆ ಬಲಿ!

 

35 ವರ್ಷದ ಇಮ್ರಾನ್ ಪಟೇಲ್ ಮತ್ತು ತಂಡ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಡುತ್ತಿತ್ತು. ಆರಂಭಿಕ‌ ಬ್ಯಾಟ್ಸ್‌ಮನ್ ಆಗಿ ಮೈದಾನಕ್ಕೆ ಬಂದ ಇಮ್ರಾನ್ ಕೆಲಕಾಲ ಆಡಿದ್ದರು, ಬಳಿಕ ಎದೆನೋವು ಕಾಣಿಸಿಕೊಂಡಿದ್ದರಿಂದ ಅಂಪೈರ್ ಅನುಮತಿ ಪಡೆದು ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದರು. ಇದೇ ತೀವ್ರ ಹೃದಯಾಘಾತಕ್ಕೆ ಒಳಗಾದ ಇಮ್ರಾನ್ ಮೈದಾನದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

 

ಅಚ್ಚರಿ ಮೂಡಿಸಿದ ಇಮ್ರಾನ್ ಸಾವು!

 

35 ವರ್ಷದ ಕ್ರಿಕೆಟಿಗ ಇಮ್ರಾನ್‌ ಅವರ ದಿಢೀರ್ ಸಾವು ಸಹ‌ ಆಟಗಾರರಿಗೆ ಅಚ್ಚರಿ ಮೂಡಿಸಿದೆ. ದೈಹಿಕ‌‌ ಹಾಗೂ ಮಾನಸಿಕವಾಗಿ ಇಮ್ರಾನ್ ಬಹಳಷ್ಟು ಆರೋಗ್ಯವಾಗಿದ್ದರು. ಆದರೆ ಇದೀಗ ಏಕಾಏಕಿ‌ ಸಾವಿನ‌ ಕದ ತಟ್ಟಿದ್ದಾರೆ. ಇಮ್ರಾನ್ ಪಟೇಲ್ ಪತ್ನಿ ಹಾಗೂ 3 ಮಕ್ಕಳನ್ನು‌ ಅಗಲಿದ್ದಾರೆ.