ರಿಪಬ್ಲಿಕ್ ಹಿಂದೂ:- ಪಿ.ವಿ ಸಿಂಧು ಅವರ ಹೆಸರು ಕ್ರೀಡಾ ಕ್ಷೇತ್ರದಲ್ಲಿ ಚಿರಪರಿಚಿತ. ತಮ್ಮದೇ ರೀತಿಯ ಅನೇಕ ಸಾಧನೆಗಳನ್ನು ಮಾಡಿ ಒಲಿಂಪಿಕ್ಸ್ ನಲ್ಲಿ ಮಿಂಚಿದ ಬ್ಯಾಡ್ಮಿಂಟನ್ ತಾರೆ. ಇದೀಗ ಇವರ ವಿವಾಹದ ಬಗ್ಗೆ ಗುಸುಗುಸು ಕೇಳಿಬರುತ್ತಿದ್ದು ಸಿಂದು ವಿವಾಹವಾಗಲಿರುವ ಹುಡುಗನ ಬಗ್ಗೆ ಸುದ್ದಿ ಹೊರಬಿದ್ದಿದೆ.
ಪಿ.ವಿ ಸಿಂಧು ಕೈ ಹಿಡಿಯಲಿರುವ ಹುಡುಗ ಯಾರು..?
2 ಬಾರಿಯ ಒಲಿಂಪಿಕ್ ಚಾಂಪಿಯನ್, ಮಾಜಿ ವಿಶ್ವ ಚಾಂಪಿಯನ್ ಆಗಿ ಖ್ಯಾತಿ ಗಳಿಸಿರುವ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರಿಗೆ ಹೈದರಾಬಾದ್ ಮೂಲದ ವೆಂಕಟ ಸಾಯಿ ದತ್ತ ಎಂಬ ಉದ್ಯಮಿ ಜೊತೆ ಮದುವೆ ನಿಶ್ಚಯವಾಗಿದೆ. ಇವರು ಐಪಿಎಲ್ ತಂಡದ ಜೊತೆ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ ವೆಂಕಟ ದತ್ತ ಸಾಯಿ ಅವರು ಪಾಸಿಡೆಕ್ಸ್ ಟೆಕ್ನಾಲಜೀಸ್ ನಲ್ಲಿ ಕಾರ್ಯಕಾರಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಪಿವಿ ಸಿಂಧು ಅವರು ಲಖನೌನಲ್ಲಿ ಸಯ್ಯದ್ ಮೋದಿ ಇಂಟರ್ ನ್ಯಾಶನಲ್ ಟೂರ್ನಿ ಯಲ್ಲಿ ಗೆದ್ದು ಬೀಗಿದ ಸಂಭ್ರಮದಲ್ಲಿರುವಾಗಲೇ ಈ ಸಂಗತಿಯನ್ನು ಅವರ ಕುಟುಂಬ ಬಹಿರಂಗಪಡಿಸಿದೆ.
ಡಿ.22ರಂದು ನಡೆಯಲಿದೆ ವಿವಾಹ ಕಾರ್ಯಕ್ರಮ...!
ಪಿ.ವಿ ಸಿಂಧು ಮತ್ತು ವೆಂಕಟ ದತ್ತ ಸಾಯಿ ಅವರು ಇದೇ ಡಿ.22ರಂದು ಸಪ್ತಪದಿ ತುಳಿಯಲಿದ್ದಾರೆ. ಉದಯಪುರದಲ್ಲಿ ವಿವಾಹ ನೆರವೇರಲಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪಿ.ವಿ ಸಿಂಧು ಅವರ ತಂದೆ ಪಿ.ವಿ ರಮಣ ಅವರು ನಮ್ಮ ಎರಡೂ ಕುಟುಂಬಗಳು ಹಿಂದಿನಿಂದಲೂ ಅತ್ಯಂತ ಆತ್ಮೀಯವಾಗಿದ್ದೇವೆ. ಮದುವೆ ಪ್ರಸ್ತಾಪ ನಡೆದು ಅದೆಷ್ಟೋ ತಿಂಗಳು ಕಳೆದಿವೆ. ಜನವರಿಯ ಬಳಿಕ ಸಿಂಧು ಅವರು ಬಿಝಿ ಶೆಡ್ಯುೂಲ್ ನಲ್ಲಿ ಇರುವ ಹಿನ್ನೆಲೆಯಲ್ಲಿ ಇದೀಗ ವಿವಾಹ ಕಾರ್ಯಕ್ರಮ ನೆರವೇರಿಸಲು ಸಮಯ ಸಿಕ್ಕಿದೆ. ಹಾಗಾಗಿ ಡಿ.22ಕ್ಕೆ ಮಾಡಲು ನಿರ್ಧರಿಸಿದ್ದೇವೆ' ಎಂದಿದ್ದಾರೆ. ಡಿ.20ರಿಂದಲೇ ಮದುವೆ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಡಿ. 24ರಂದು ಹೈದರಾಬಾದ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ಕೂಡಾ ಅದ್ಧೂರಿಯಾಗಿ ನಡೆಯಲಿದೆ. ವಿವಾಹ ಸಮಾರಂಭಕ್ಕೆ ಅನೇಕ ಗಣ್ಯೋಪಗಣ್ಯರಿಗೆ ಆಮಂತ್ರಣ ಕೂಡಾ ನೀಡಲಾಗಿದೆ ಎನ್ನಲಾಗುತ್ತಿದೆ.