ಮಸ್ಕತ್: ಮಸ್ಕತ್‌ನಲ್ಲಿ ನಡೆದ ಜೂನಿಯರ್ ಏಷ್ಯಾ ಕಪ್ ಹಾಕಿ ಫೈನಲ್‌ನಲ್ಲಿ ಭಾರತ ಪಾಕಿಸ್ತಾನವನ್ನು 4-3 ಅಂತರದಿಂದ ಸೋಲಿಸಿ ಕಿರೀಟವನ್ನು ಕಾಪಾಡಿಕೊಂಡಿತು. ಅರೈಜೀತ್ ಸಿಂಗ್ ತಮ್ಮ ಅದ್ಬುತ ಆಟದ ಮೂಲಕ 18ನೇ, 47ನೇ ಮತ್ತು 54ನೇ ನಿಮಿಷಗಳಲ್ಲಿ ಗೋಲು ಬಾರಿಸಿ ಭಾರತದ ಜಯಕ್ಕೆ ಕಾರಣರಾದರು. ಆರಂಭದಲ್ಲೇ ಪಾಕಿಸ್ತಾನದ ಉನ್ನನ್ ಶಾಹಿದ್ ಮೂರನೇ ನಿಮಿಷದಲ್ಲಿ ಗೋಲು ಬಾರಿಸಿ ಪಾಕ್ ಪರ ಮುನ್ನಡೆ ಸಾಧಿಸಿದ್ದರು. ನಂತರ ಅರೈಜೀತ್ ಸಿಂಗ್ ಅವರ ಆಟ ಪ್ರಾರಂಭ ಮಾಡಿದರು.
ಚಾಂಪಿಯನ್‌ಶಿಪ್ ಗೆಲುವಿನಲ್ಲಿ ಮೊದಲಾರ್ಧದ ಕೊನೆಯ ಕ್ಷಣದಲ್ಲಿ ಭಾರತ 3-2 ಮುನ್ನಡೆ ಸಾಧಿಸಿತ್ತು. ಮೂರನೇ ಕ್ವಾರ್ಟರ್‌ನಲ್ಲಿ ಪಾಕಿಸ್ತಾನ ಸಮಬಲ ಸಾಧಿಸಿದರು. ಆದರೆ ಅಂತಿಮ ಕ್ವಾರ್ಟರ್‌ನಲ್ಲಿ ಆರೈಜೀತ್ ಮತ್ತೊಂದು ಗೋಲು ಬಾರಿಸಿ ಭಾರತಕ್ಕೆ ವಿಜಯ ಕಿರೀಟವನ್ನು ತಂದುಕೊಟ್ಟರು. ಹಾಕಿ ಚಾಂಪಿಯನ್ ಸ್ಥಾನವನ್ನು ಭಾರತ ತನ್ನದಾಗಿಸಿಕೊಂಡಿತು.