ಸತತ 2 ಶತಕಗಳ ಸಾಧನೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದ ಸಂಜು ಸ್ಯಾಮ್ಸನ್

  • 02 Nov 2024 09:44:13 AM

ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ 61 ರನ್‌ಗಳಿಂದ ಭರ್ಜರಿ ಜಯ ಸಾಧಿಸಿತು. ಡರ್ಬನ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ, ಭಾರತ 202 ರನ್‌ಗಳನ್ನು ಬಾರಿಸಿದ ನಂತರ ದಕ್ಷಿಣ ಆಫ್ರಿಕಾ 141 ರನ್‌ಗಳಿಗೆ ಆಲೌಟ್ ಆಯಿತು.

 

ಸಂಜು ಸ್ಯಾಮ್ಸನ್ ಅವರ ಸತತ ಶತಕದಿಂದ ಭಾರತ ತಂಡ ದೊಡ್ಡ ಮೊತ್ತವನ್ನು ಸಾಧಿಸಿತು. 50 ಎಸೆತಗಳಲ್ಲಿ 107 ರನ್ ಗಳಿಸಿರುವ ಸ್ಯಾಂಸನ್, 10 ಸಿಕ್ಸರ್‌ಗಳನ್ನು 7 ಬೌಂಡರಿಗಳನ್ನು ಹೊಡೆದಿದ್ದರು.

 

ಇವರು ದೇಶದಲ್ಲಿ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸತತವಾಗಿ ಎರಡು ಶತಕಗಳನ್ನು ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಆಗಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.