ದುಬೈ: ಮೊನ್ನೆಯಷ್ಟೇ ದುಬೈನಲ್ಲಿ ನಡೆದ ಅಂಡರ್-19 ಏಷ್ಯಾ ಕಪ್ ಫೈನಲ್ ಪಂದ್ಯಾಟದಲ್ಲಿ ಟೀಂ ಇಂಡಿಯಾ ವಿರುದ್ಧ ಬಾಂಗ್ಲಾದೇಶ ಗೆಲುವು ಸಾಧಿಸಿತ್ತು. ಇದೇ ಪಂದ್ಯಾಟದಲ್ಲಿ ಗೆಲುವು ಸನಿಹವಾಗುತ್ತಿದ್ದಂತೆ ಬಾಂಗ್ಲಾ ಅಭಿಮಾನಿಗಳು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದಾರೆ. ಜೊತೆಗೆ ಇನ್ನೂ ಜೋರಾಗಿ ಕೂಗುವಂತೆ ಬಾಂಗ್ಲಾ ನಾಯಕ ಅಭಿಮಾನಿಗಳಿಗೆ ಪ್ರೋತ್ಸಾಹ ನೀಡಿದ್ದಾನೆ. ಈ ಘಟನೆಯ ವಿಡಿಯೋ ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು!
ಹೈವೋಲ್ಟೇಜ್ ಫೈನಲ್ ಪಂದ್ಯಾಟದಲ್ಲಿ ಮೊದಲು ಬ್ಯಾಟ ಮಾಡಿದ ಬಾಂಗ್ಲಾದೇಶ 199 ರನ್ ಬಾರಿಸಿತ್ತು. ಟಾರ್ಗೆಟ್ ಚೇಸ್ ಮಾಡಿದ ಟೀಂ ಇಂಡಿಯಾ ಕೇವಲ 133 ರನ್ ಗಳಿಸುವ ಹೊತ್ತಿಗೆ ಆಲ್ ಔಟ್ ಆಯಿತು. ಇದರೊಂದಿಗೆ ಎರಡನೇ ಬಾರಿಗೆ ಬಾಂಗ್ಲಾದೇಶ ಅಂಡರ್-19 ಏಷ್ಯಾಕಪ್ ನಲ್ಲಿ ಕಪ್ ಗೆದ್ದು ಸಂಭ್ರಮಿಸಿತು. ಈ ನಡುವೆ ಬಾಂಗ್ಲಾದೇಶ ಕ್ರಿಕೆಟ್ ತಂಡ ಹಾಗೂ ಅಭಿಮಾನಿಗಳು ಅತಿರೇಕದ ವರ್ತನೆ ಮಾಡಿದ್ದಾರೆ.
ಅಲ್ಲಾಹು ಅಕ್ಬರ್ ಘೋಷಣೆಗೆ ಬಾಂಗ್ಲಾ ನಾಯಕ ಕುಮ್ಮಕ್ಕು!
ಹೌದು, ಟೀಂ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಸೋಲುತ್ತಿದೆ ಎನ್ನುವಾಗ ಬಾಂಗ್ಲಾ ಅಭಿಮಾನಿಗಳು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಲು ಆರಂಭಿಸಿದ್ದಾರೆ. ಈ ನಡುವೆ ಅಭಿಮಾನಿಗಳೇ ಜೋರಾಗಿ ಕೂಗಿ ಎಂದು ಬಾಂಗ್ಲಾ ನಾಯಕ ಅಜೀಜುಲ್ ಹಕೀಮ್ ತಮೀಮ್ ಪ್ರೋತ್ಸಾಹಿಸಿದ್ದಾನೆ. ಸದ್ಯ, ಈ ವಿಡಿಯೋ ವೈರಲ್ ಆಗುತ್ತಿದ್ದು, ಬಾಂಗ್ಲಾದೇಶದ ಈ ವರ್ತನೆಗೆ ಕಟು ಟೀಕೆ ವ್ಯಕ್ತವಾಗಿತ್ತಿದೆ.