ಬಂಟ್ವಾಳ: ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಕುದುಮಾನು ತಿಮ್ಮಪ್ಪ-ಯೋಶೋಧ ದಂಪತಿಯರ ಮಗಳು ಯಶಸ್ವಿ ಕುದುಮಾನು ಅವರು ಮಲೇಶಿಯಾದ ಕೌಲಲಂಪುರದಲ್ಲಿ ನಡೆದ *ಏಷ್ಯನ್ ಪೆಸಿಫಿಕ್ ಡೆಫ್ ಚೆಸ್* ಸ್ಪರ್ಧೆಯಲ್ಲಿ *ಕಂಚಿನ ಪದಕ* ಗೆದ್ದಿದ್ದಾರೆ.
ಚೆಸ್ ಕ್ರೀಡೆಯಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ ಯಶಶ್ವಿ, ಈ ಸಾಧನೆಯ ಮೂಲಕ ದೇಶದ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ. ಪ್ರಸ್ತುತ, ಅವರು ಮಂಗಳೂರು ಶ್ರೀನಿವಾಸ ಕಾಲೇಜಿನಲ್ಲಿ ಒಅಂ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ.
ಯಶಶ್ವಿಯ ಈ ಗೆಲುವು ಕೇವಲ ಕುಟುಂಬ ಮತ್ತು ಗ್ರಾಮದ ಹೆಮ್ಮೆ ಮಾತ್ರವಲ್ಲದೆ, ಕ್ರೀಡಾ ಲೋಕಕ್ಕೆ ಸಹ ಇನ್‌ಸ್ಪಿರೇಶನ್ ಆಗಿದೆ.
*ಅಭಿನಂದನೆಗಳೊಂದಿಗೆ ಮುಂದಿನ ಸಾಧನೆಗಳಿಗೆ ಶುಭ ಹಾರೈಕೆಗಳು.*