ನೇಣಿಗೆ ಕೊರಳೊಡ್ಡಿದ ಯುವ ಕ್ರಿಕೆಟರ್...!! ಕ್ರಿಕೆಟ್ ಆಡಿ ಮನೆಗೆ ಬಂದ ಆದಿತ್ಯನಿಗೆ ದಿಢೀರ್ ಆಗಿದ್ದೇನು..?

  • 16 Dec 2024 03:48:44 PM

ಉಡುಪಿ: ತಂತ್ರಜ್ಞಾನ ಮುಂದುವರೆಯುತ್ತಾ ಹೋದಂತೆ, ಜಗತ್ತು ಅಭಿವೃದ್ಧಿ ಹೊಂದುತ್ತಾ ಹೋದಂತೆ ಮಕ್ಕಳ, ಯುವಜನತೆಯ ಮನಸ್ಸು ಮಾತ್ರ ಸೂಕ್ಷ್ಮಗೊಳ್ಳುತ್ತಾ ಹೋಗುತ್ತಿದೆ. ಸಣ್ಣ ಸಣ್ಣ ವಿಚಾರಕ್ಕೂ ಡಿಪ್ರೆಶನ್ ಗೆ ಒಳಗಾಗೋದು, ಜೀವಾಂತ್ಯಗೊಳಿಸುವ ನಿರ್ಧಾರ ತೆಗೆದುಕೊಳ್ಳೋದು ವಿಷಾದನೀಯ. ಅದೆಷ್ಟೋ ಯುವ ತರುಣರು ಕ್ಷುಲ್ಲಕ ಕಾರಣಕ್ಕೆ ಜೀವ ಕಳೆದುಕೊಂಡು ಹೆತ್ತವರ ಕಣ್ಣೀರಿಗೆ ಕಾರಣರಾಗುತ್ತಾರೆ. ಇದೀಗ ಈ ಘಟನೆಯೂ ಕೂಡಾ ವಿಷಾದನೀಯವಾಗಿದ್ದು ಯುವ ಕ್ರಿಕೆಟಿಗನೋರ್ವ ತನ್ನ ಬದುಕನ್ನು ತಾನೇ ದುರಂತವಾಗಿ ಅಂತ್ಯವಾಗಿಸಿಕೊಂಡಿದ್ದಾನೆ. 

 

ಯುವ ಕ್ರಿಕೆಟರ್ ಆದಿತ್ಯನಿಗೆ ಏನಾಯ್ತು..?

 

ಯುವ ಕ್ರಿಕೆಟರ್ ಆದಿತ್ಯ ಎಂಬಾತ ನೇಣಿಗೆ ಶರಣಾದ ಘಟನೆ Udupi ಜಿಲ್ಲೆಯ ಉದ್ಯಾವರ ಕೇದಾರ್ ಬಳಿ ನಡೆದಿದೆ. ನಿನ್ನೆ ಎಂದಿನಂತೆ cricket ಪಂದ್ಯಾಟಕ್ಕೆ ಆಡಲೆಂದು ಈತ ತನ್ನ ತಂಡದ ಜೊತೆ ಹೋಗಿದ್ದ. ಮುಂಜಾನೆ ಮೂರು ಗಂಟೆ ವೇಳೆಗೆ ಮನೆಗೆ ಬಂದಿದ್ದಾನೆ. ನಂತರ ಈ ತಪ್ಪು ನಿರ್ಧಾರ ತೆಗೆದುಕೊಂಡಿದ್ದಾನೆ.

 

ಬೆಳಿಗ್ಗೆ ಏಳು ಮೂವತ್ತು ಸುಮಾರಿಗೆ ಅಜ್ಜಿ ಆತನ ಕೋಣೆಯ ಬಾಗಿಲು ಬಡಿದಾಗ ಆತ ತೆಗೆಯಲಿಲ್ಲ. ಬಾಗಿಲು ತೆರೆಯದೇ ಇದ್ದುದಕ್ಕೆ ಕಿಟಕಿಯಿಂದ ಇಣುಕಿದಾಗ ಆತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆತನ ತಂದೆ, ತಾಯಿ ಈ ಮೊದಲೇ ತೀರಿ ಹೋಗಿದ್ದು, ಅಜ್ಜಿ ಮತ್ತು ಸಹೋದರನ ಆಶ್ರಯದಲ್ಲಿ ಬೆಳೆಯುತ್ತಿದ್ದ. ಈಗ ಆದಿತ್ಯ ಇದ್ದಕಿದ್ದಂತೆ ನೇಣಿಗೆ ಕೊರಳೊಡ್ಡಿರುವುದು ಮನೆಯವರಿಗೆ, ಸ್ಥಳೀಯರಿಗೆ, ಸ್ನೇಹಿತರಿಗೆ ನಿಜಕ್ಕೂ ಆಘಾತಕಾರಿ ವಿಷಯವಾಗಿದೆ.

 

ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆತನ ಸಹೋದರ ಸಚಿನ್‌ ಅವರು ನೀಡಿರುವ ದೂರಿನ ಹಿನ್ನೆಲೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ತನ್ನ ಆಪ್ತ ಗೆಳೆಯನ ಹೆಸರಿನಲ್ಲಿ ಕ್ರಿಕೆಟ್ ತಂಡ ಕಟ್ಟಿಕೊಂಡಿದ್ದ ಆದಿತ್ಯ.!!

 

ಕಳೆದ ವರ್ಷ ಈತನ ಆಪ್ತ ಗೆಳೆಯ ಸುಕ್ಷಿತ್ ಅಪಘಾತದಲ್ಲಿ ಮೃತಪಟ್ಟಿದ್ದ. ಆತನ ಹೆಸರಿನಲ್ಲಿ ಆದಿತ್ಯ ಕ್ರಿಕೆಟ್‌ ತಂಡವನ್ನು ಕೂಡಾ ಕಟ್ಟಿಕೊಂಡಿದ್ದ. ಆದಿತ್ಯ ಶನಿವಾರ ರಾತ್ರಿ ಪೆರಂಪಳ್ಳಿಯಲ್ಲಿ ನಡೆದ ಕ್ರಿಕೆಟ್‌ ಪಂದ್ಯಾಟದಲ್ಲಿ ತನ್ನ ತಂಡದೊಂದಿಗೆ ಭಾಗವಹಿಸಿದ್ದ. ಅತ್ಯಂತ ಕ್ರಿಯಾಶೀಲನಾಗಿದ್ದು, ಉತ್ತಮ ಆಟಗಾರನೆನಿಸಿಕೊಂಡಿದ್ದ. ಇದ್ದಕಿದ್ದಂತೆ ಈತನಿಗೇನಾಯ್ತು ಎಂಬುವುದೇ ಕುತೂಹಲಕ್ಕೆ ಕಾರಣವಾಗಿದೆ. ಈತನ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.