ಅಶ್ವಿನ್ ರವಿಚಂದ್ರನ್ ಅವರ ದಿಢೀರ್ ನಿವೃತ್ತಿಯ ಘೋಷಣೆ; ಕ್ರಿಕೆಟ್ ಪ್ರಪಂಚಕ್ಕೆ ದೊಡ್ಡ ಅಚ್ಚರಿ ಮೂಡಿಸಿದೆ!

  • 19 Dec 2024 03:55:55 PM

ಭಾರತದ ಕ್ರಿಕೆಟ್ ಸ್ಟಾರ್ ರವಿಚಂದ್ರನ್ ಅಶ್ವಿನ್ ಅವರು ಇಂದು ಸರಣಿಯ ನಡುವಲ್ಲೇ ಪತ್ರಿಕಾಗೋಷ್ಠಿ ಕರೆದು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ. 38 ವರ್ಷ ವಯಸ್ಸಿನ ಅಶ್ವಿನ್ ಅವರ ಈ ದಿಢೀರ್ ನಿರ್ಧಾರವು ಕ್ರಿಕೆಟ್ ಪ್ರಪಂಚಕ್ಕೆ ಅಚ್ಚರಿ ಮೂಡಿಸಿದೆ.

 

ಅಶ್ವಿನ್ 106 ಟೆಸ್ಟ್ ಪಂದ್ಯಗಳಲ್ಲಿ 537 ವಿಕೆಟ್‌ಗಳನ್ನು ಪಡೆದು, ಟೆಸ್ಟ್ ಕ್ರಿಕೆಟ್‌ನ ಟಾಪ್ 10 ವಿಕೆಟ್ ತಕರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅವರು 6 ಶತಕಗಳನ್ನು ದಾಖಲಿಸಿದ್ದಾರೆ.

 

 

ನಾನು ಕ್ರಿಕೆಟ್ ಆಡಿದ ಕಾಲದಿಂದ ನನಗೆ ಗೌರವ ಸಿಕ್ಕಿತ್ತು, ಆದರೆ ನಾನು ಹೊಸ ಹಾದಿಯತ್ತ ಸಾಗಲು ತಯಾರಾಗಿದ್ದೇನೆ. ನಾನು ನನ್ನ ಅನುಭವವನ್ನು ಮುಂದೆ ಹಂಚಲು ಮತ್ತು ಕ್ರಿಕೆಟ್ ಕ್ಷೇತ್ರದಲ್ಲಿ ಮತ್ತಷ್ಟು ಕೊಡುಗೆ ನೀಡಲು ರೆಡಿಯಾಗಿದ್ದೇನೆ ಎಂದು ಅವರು ತಮ್ಮ ನಿವೃತ್ತಿ ಘೋಷಣೆಯಲ್ಲಿ ಹೇಳಿ ಕೊಂಡಿದ್ದಾರೆ.

 

 ನಿವೃತ್ತಿಯ ನಂತರ, ಅಶ್ವಿನ್ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಐಪಿಎಲ್‌ನಲ್ಲಿ ಆಡುವುದಾಗಿ ಹೇಳಿದ್ದಾರೆ.