ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರನಾದ ರಾಬಿನ್ ಉತ್ತಪ್ಪ ಅವರ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾಗಿದೆ. ಅವರು ನಡೆಸುತ್ತಿದ್ದ ಸೆಂಚುರಿಸ್ ಲೈಫ್ ಸ್ಟೈಲ್ ಬ್ರಾಂಡ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯಲ್ಲಿ, ಉದ್ಯೋಗಿಗಳ ಪಿಎಫ್ ಹಣವನ್ನು ಕಟ್ ಮಾಡಿದ್ದರು. ಆದ್ರೆ ಅದನ್ನು ಸಂಬಂಧಿತ ಇಲಾಖೆಗೆ ಜಮಾ ಮಾಡದೇ ಸುಮಾರು ₹23 ಲಕ್ಷದ ಅಂದಾಜು ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಪ್ರಕರಣದ ಹಿನ್ನೆಲೆಯಲ್ಲಿ, ಪ್ರಾವಿಡೆಂಟ್ ಫಂಡ್ ಆಯುಕ್ತ ಷಡಾಕ್ಷರಿಯಾದ ಗೋಪಾಲ ರೆಡ್ಡಿ ಅವರು, ಡಿಸೆಂಬರ್ 4 ನೆಯ ತಾರೀಕಿನಂದು ಪುಲಿಕೇಶಿ ನಗರ ಠಾಣೆಗೆ ಪತ್ರ ರಾಬಿನ್ ಉತ್ತಪ್ಪ ಅವರನ್ನು ಬಂಧಿಸ ಬೇಕೆೆಂದು ಪಾತ್ರಬರೆದು ಸೂಚಿಸಿದ್ದಾರೆ.
ಪೊಲೀಸರು, ರಾಬಿನ್ ಉತ್ತಪ್ಪ ಅವರ ಮನೆಗೆ ನೋಟಿಸ್ ನೀಡಲು ಎಂದು ಹೋದಾಗ ಅಲ್ಲಿ , ಅವರು ಆ ವಿಳಾಸದಲ್ಲಿ ವಾಸವಿಲ್ಲದ ಎಂಬುದು ತಿಳಿದುಬಂದಿದೆ. ಇದೀಗಅವರು ದುಬೈನಲ್ಲಿ ನೆಲೆಸಿದ್ದಾರೆ ಎಂದು ವರದಿಯಾಗಿದೆ.ಈ ಪ್ರಕರಣವು ಈಗ ಕ್ರಿಕೆಟ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವನ್ನುಂಟು ಮಾಡಿದೆ.