ಕಾಡು ಮಠ: ಫ್ರೆಂಡ್ಸ್ ಕಾಡುಮಠದ ವತಿಯಿಂದ ಆಯೋಜಿಸಲಾಗುತ್ತಿರುವ ಫ್ರೆಂಡ್ಸ್ ಟ್ರೋಫಿ 2024 ಕ್ರಿಕೆಟ್ ಪಂದ್ಯಾಟವು 2025 ಫೆಬ್ರವರಿ 1 ಮತ್ತು 2ರಂದು ಬೊಳ್ಳಾದೆ ಕ್ರೀಡಾಂಗಣ, ಕುಡ್ತ ಮುಗೇರಿನಲ್ಲಿ ನಡೆಯಲಿದೆ.
ಬೆಳಿಗ್ಗೆ 8 ಗಂಟೆಗೆ ಆರಂಭವಾಗುವ ಈ 11 ಜನರ ಕ್ರಿಕೆಟ್ ಪಂದ್ಯಾಟದಲ್ಲಿ,
ಪ್ರಥಮ ಸ್ಥಾನ ಪಡೆದ ತಂಡಕ್ಕೆ ₹20,000 ನಗದು ಬಹುಮಾನ ಹಾಗೂ ಫ್ರೆಂಡ್ಸ್ ಟ್ರೋಫಿ.
ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ₹10,000 ನಗದು ಬಹುಮಾನ ಮತ್ತು ಫ್ರೆಂಡ್ಸ್ ಟ್ರೋಫಿ
ತೃತೀಯ ಸ್ಥಾನಕ್ಕೆ ಫ್ರೆಂಡ್ಸ್ ಟ್ರೋಫಿ ನೀಡಲಾಗುವುದು.
ಅದಲ್ಲದೆ, ಉತ್ತಮ ದಾಂಡಿಗ, ಉತ್ತಮ ದಾಳಿಗಾರ ಹಾಗೂ ಸರಣಿ ಶ್ರೇಷ್ಠ ಆಟಗಾರರನ್ನು ಪ್ರತ್ಯೇಕವಾಗಿ ಗೌರವಿಸಲಾಗುತ್ತದೆ. ಪ್ರತಿಯೊಂದು ಪಂದ್ಯವು 3 ಓವರ್‌ಗಳಿಗೆ ಸೀಮಿತವಾಗಿರುತ್ತದೆ. ಅಂಪೈರ್ ಮತ್ತು ಸಂಘಟಕರ ತೀರ್ಮಾನ ಅಂತಿಮವಾಗಿದೆ. ಸಂದರ್ಭದ ಅವಶ್ಯಕತೆಗೆ ಅನುಸಾರವಾಗಿ ಓವರ್‌ಗಳನ್ನು ಕಡಿತಗೊಳಿಸಬಹುದು.
ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರವೇಶ ಶುಲ್ಕ ₹2,000 ನಿಗದಿ ಮಾಡಲಾಗಿದೆ. ಮೊದಲ 50 ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿರುವುದು. ಹೆಸರು ನೋಂದಾಯಿಸಲು ಇಚ್ಚಿಸುವಲ್ಲಿ ₹1,000 ಮುಂಗಡವಾಗಿ ಪಾವತಿಸಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ 9008706469, 9740944529, ಅಥವಾ 99026169293 ಅನ್ನು ಸಂಪರ್ಕಿಸಿ.