ಕಬಡ್ಡಿ ಪ್ರೇಮಿಗಳಿಗೆ ಬಿಗ್ ಫೆಸ್ಟ್ – ರುದ್ರ ಫ್ರೆಂಡ್ಸ್ ಆಯೋಜಿಸಿದ ಅದ್ಧೂರಿ ಟೂರ್ನಮೆಂಟ್! ಏಪ್ರಿಲ್ 19 !ಕ್ಕೆ

  • 23 Mar 2025 03:36:39 PM

ವಾಣಿನಗರ: ಕ್ರೀಡಾಸಕ್ತರಿಗೆ ಉತ್ಸಾಹಭರಿತ ಸ್ಪರ್ಧೆಗೆ ಆಮಂತ್ರಿಸುತ್ತಾ ರುದ್ರ ಫ್ರೆಂಡ್ಸ್ ಪಾದ್ರೆ ವಾಣಿನಗರ ತಂಡ 65 ಕೆಜಿ ಫ್ಲಡ್‌ಲೈಟ್ ಕಬಡ್ಡಿ ಟೂರ್ನಮೆಂಟ್ ಅನ್ನು ಅದ್ಧೂರಿಯಾಗಿ ಆಯೋಜಿಸಿದೆ. ವಾಣಿನಗರ ಶಾಲಾ ಮೈದಾನದಲ್ಲಿ ನಡೆಯಲಿರುವ ಈ ಕಬಡ್ಡಿ ಪಂದ್ಯಾವಳಿ ಗೆ ಆಯ್ಕೆಗೊಂಡ 32 ತಂಡಗಳು ಭಾರೀ ಪೈಪೋಟಿಗೆ ಸಜ್ಜಾಗಿವೆ.

 

ಈ ಸ್ಪರ್ಧೆಯ ಪ್ರಮುಖ ಆಕರ್ಷಣೆ ಏನೆಂದರೆ ಇದು 8 ಟ್ರಿಪ್ ಟೂರ್ನಮೆಂಟ್ ಆಗಿದ್ದು, ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅದ್ಭುತ ವೇದಿಕೆಯಾಗಲಿದೆ. 

 

ಪ್ರಥಮ ಬಹುಮಾನ ₹10,000/- ಹಾಗೂ ಟ್ರೋಫಿ, 

 

ದ್ವಿತೀಯ ಬಹುಮಾನ ₹6,000/-,

 

 ತೃತೀಯ ಹಾಗೂ ಚತುರ್ಥ ಬಹುಮಾನ ತಲಾ ₹2,000/- ಎಂದು ಘೋಷಿಸಲಾಗಿದೆ. 

 

ಅಲ್ಲದೇ, ಸರ್ವಶ್ರೇಷ್ಠ ರೈಡರ್, ಡಿಫೆಂಡರ್ ಹಾಗೂ ಆಲ್‌ರೌಂಡರ್‌ಗಾಗಿ ವೈಯಕ್ತಿಕ ಪ್ರಶಸ್ತಿಗಳು ನೀಡಲಾಗುತ್ತವೆ.

 

ನಿಯಮಗಳು:

 

ತಂಡಗಳ ನೋಂದಣಿಗೆ ಕೊನೆಯ ದಿನಾಂಕ ಏಪ್ರಿಲ್ 10, 2025

 

ಪಂದ್ಯ ರಾತ್ರಿ 7:00ಕ್ಕೆ ಆರಂಭವಾಗಲಿದೆ

 

ಅಂಪೈರ್ ಹಾಗೂ ಸಮಿತಿಯ ತೀರ್ಮಾನ ಅಂತಿಮ

 

ಸಂಪರ್ಕಿಸಿ: 6282763960 / 8589967310