ಬಾಂಗ್ಲಾದೇಶ ಕ್ರಿಕೆಟ್ ತಾರೆ ತಮೀಮ್ ಇಕ್ಬಾಲ್ ಆಸ್ಪತ್ರೆಗೆ ದಾಖಲು; ವೈದ್ಯಕೀಯ ತಪಾಸಣೆಯಲ್ಲಿ ಹೃದಯಾಘಾತ ದೃಢ!

  • 24 Mar 2025 04:06:49 PM

ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ತಮೀಮ್ ಇಕ್ಬಾಲ್ ಅವರು ಢಾಕಾ ಪ್ರೀಮಿಯರ್ ಡಿವಿಷನ್ ಕ್ರಿಕೆಟ್ ಲೀಗ್ ಪಂದ್ಯದ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ತಪಾಸಣೆಯಲ್ಲಿ ಹೃದಯಾ ಘಾತವಾಗಿರುವುದು ಎಂದು ದೃಢಪಟ್ಟಿದೆ.

 

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಮುಖ್ಯ ವೈದ್ಯರಾದ ಡಾ. ದೆಬಾಶಿಶ್ ಚೌಧರಿ , ತಮೀಮ್ ಅವರ ಆರೋಗ್ಯ ಸ್ಥಿತಿ ಮೇಲ್ವಿಚಾರಣೆಯಲ್ಲಿದ್ದು, ಅಗತ್ಯ ಎಲ್ಲಾ ವೈದ್ಯಕೀಯ ನೆರವು ನೀಡಲಾಗುತ್ತಿದೆ. ಎಂದು ತಿಳಿಸಿದ್ದಾರೆ. 

 

ತಮೀಮ್ ಅವರ ಅನಾರೋಗ್ಯದ ಸುದ್ದಿಯು ಅವರ ಅಭಿಮಾನಿಗಳಲ್ಲಿ ಮತ್ತು ಕ್ರೀಡಾ ವಲಯದಲ್ಲಿ ದೊಡ್ಡ ಆಘಾತವನ್ನು ಉಂಟುಮಾಡಿದೆ. ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮೀಮ್ ಅವರ ತ್ವರಿತ ಚೇತರಿಕೆಗೆ ಶುಭ ಕೋರಿದ್ದಾರೆ.