ಬೊಳ್ಪಾದೆ: FRIENDS KUDRIYA ಸಂಸ್ಥೆಯ ಆಶ್ರಯದಲ್ಲಿ, School Mankude Premier League (SMPL) ಎಂಬ ಹೆಸರಿನಲ್ಲಿ ಲೀಗ್ ಮಾದರಿಯ 7 ತಂಡಗಳ ಅಂಡರ್ ಆರ್ಮ್ ಕ್ರಿಕೆಟ್ ಟೂರ್ನಮೆಂಟ್ 2025ರ ಏಪ್ರಿಲ್ 13, ಭಾನುವಾರ ಬೊಳ್ಪಾದೆ ಕ್ರೀಡಾಂಗಣದಲ್ಲಿ ಜರುಗಲಿದೆ. ಬೆಳಿಗ್ಗೆ 7.30ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದೊಂದಿಗೆ ಈ ಕ್ರಿಕೆಟ್ ಹಬ್ಬಕ್ಕೆ ಪ್ರಾರಂಭವಾಗಲಿದೆ.
Season 1 ರೂಪದಲ್ಲಿ ನಡೆಯುವ ಈ ಟೂರ್ನಮೆಂಟ್‌ನಲ್ಲಿ ವಿಜೇತ ತಂಡಕ್ಕೆ ₹8,888 ಮತ್ತು ₹ ಭವ್ಯ SMPL ಟ್ರೋಫಿ ನೀಡಲಾಗುವುದು. ದ್ವಿತೀಯ ಸ್ಥಾನಕ್ಕೆ 6,666 ನಗದು ಸಹಿತ ಟ್ರೋಫಿ ಮತ್ತು ತೃತೀಯ ಮತ್ತು ಚತುರ್ಥ ಸ್ಥಾನಗಳಿಗೆ SMPL ಟ್ರೋಫಿಗಳೊಂದಿಗೆ ಗೌರವ ನೀಡಲಾಗುತ್ತದೆ.
ಅದಲ್ಲದೇ ಉತ್ತಮ ದಾಂಡಿಗ, ದಾಳಿಗಾರ ಹಾಗೂ ಸವ್ಯಸಾಚಿ ಆಟಗಾರರಿಗೆ ವಿಶೇಷ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.
ಸಂಜೆ 7.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಜೊತೆಗೆ ಸ್ಮರಣೀಯ ಕ್ಷಣಗಳ ಸಾಕ್ಷಿಯಾಗಲಿದೆ.
FRIENDS KUDRIYA ತಂಡ ಈ ವಿಭಿನ್ನ ಹಾಗೂ ಉತ್ಸಾಹಭರಿತ ಟೂರ್ನಮೆಂಟ್‌ಗೆ ಸಿದ್ಧವಾಗುತ್ತಿದ್ದು ಕ್ರಿಕೆಟ್ ಪ್ರೇಮಿಗಳಿಗಾಗಿನ ಕಾಯುತ್ತಿದೆ