ಮುಂಬೈ: ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಇದೀಗ ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿ, ಕ್ರೀಡಾ ಲೋಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ.
ಈ ನಿರ್ಧಾರವನ್ನು ಅವರು ಇನ್ಸ್ಟಾಗ್ರಾಂದ ಮೂಲಕ ಬಹಿರಂಗಪಡಿಸಿದ್ದಾರೆ. ಅವರು ಇನ್ನು ಮುಂದಿನ ದಿನಗಳಲ್ಲಿ ಅವರು ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಅಭಿಮಾನಿಗಳಲ್ಲಿ ‘ಹಿಟ್ ಮ್ಯಾನ್’ ಎಂಬ ಹೆಸರಿನಿಂದ ಖ್ಯಾತರಾಗಿರುವ ರೋಹಿತ್ ಅವರು, ಕಳೆದ ಎರಡು ದಶಕಗಳಲ್ಲಿ ಭಾರತೀಯ ಕ್ರಿಕೆಟ್ಗೆ ಅನನ್ಯ ಕೊಡುಗೆಗಳನ್ನು ನೀಡಿದ್ದಾರೆ.
ಅವರ ನಾಯಕತ್ವದ ನಿಯಂತ್ರಣ, ಶ್ರೇಷ್ಠ ಬ್ಯಾಟಿಂಗ್ ಮತ್ತು ಒತ್ತಡದ ಸಂದರ್ಭಗಳಲ್ಲಿ ಶಾಂತತೆ ಕಾಪಾಡಿದ ಶೈಲಿ ಇವೆಲ್ಲ ಅವರನ್ನ ವಿಭಿನ್ನ ಆಟಗಾರನನ್ನಾಗಿ ರೂಪಿಸಿತು.
ಟೆಸ್ಟ್ ಕ್ರಿಕೆಟ್ನಲ್ಲಿ ಇವರ ಅನುಭವವು ತಂಡಕ್ಕೆ ಆಧಾರವಾಗಿತ್ತು. ಇದೀಗ ಅವರ ನಿವೃತ್ತಿಯ ಘೋಷಣೆಯು ಅಭಿಮಾನಿಗಳ ಮನಸ್ಸಿಗೆ ನುಸುಳಿದ ನೋವಿನ ಸುದ್ದಿಯಾಗಿದೆ.
ಭಾರತಕ್ಕೆ ಅಪಾರ ಗೆಲುವುಗಳನ್ನು ತಂದ ಈ ಪ್ರತಿಭಾವಂತ ಆಟಗಾರನನ್ನು longer whites ನಲ್ಲಿ ನೋಡಲಾಗದಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸಂಗತಿ
ಕ್ರಿಕೆಟ್ ಪ್ರೇಮಿಗಳು ಭವಿಷ್ಯದಲ್ಲಿ ಏಕದಿನ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾರಿಂದ ಇನ್ನಷ್ಟು ಅದ್ಭುತ ಪ್ರದರ್ಶನಗಳ ನಿರೀಕ್ಷೆಯಲ್ಲಿದ್ದಾರೆ.