ಐಪಿಎಲ್‌ ಮೇ 17ರಿಂದ ಪುನರಾರಂಭ: ಬೆಂಗಳೂರಿನಲ್ಲಿ ಮೊದಲ ಪಂದ್ಯ!

  • 14 May 2025 10:35:26 AM


ಮುಂಬೈ: ಬಿಸಿಸಿಐ ದೃಢಪಡಿಸಿದಂತೆ, ತಾತ್ಕಾಲಿಕವಾಗಿ ಸ್ಥಗಿತಗೊಂಡ ಐಪಿಎಲ್‌ ಪಂದ್ಯಗಳು ಮೇ 17 ರಿಂದ ಪುನರ್ ಆರಂಭವಾಗಲಿದೆ.

 

ಮೊದಲ ಪಂದ್ಯ ಆರ್‌ಸಿಬಿ ಮತ್ತು ಕೆಕೆಆರ್‌ ತಂಡಗಳ ನಡುವೆ ಮೇ 17 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

 

ಮೇ 29 ರಂದು ಮೊದಲ ಕ್ವಾಲಿಫೈಯರ್‌ ಪಂದ್ಯ ನಡೆಯಲಿದ್ದು, ಮೇ 30 ರಂದು ಎಲಿಮಿನೇಟರ್‌ ಪಂದ್ಯ ನಡೆಯಲಿದೆ. ಜೂನ್‌ 1 ರಂದು ಎರಡನೇ ಕ್ವಾಲಿಫೈಯರ್‌ ಪಂದ್ಯ ಮತ್ತು ಜೂನ್‌ 3 ರಂದು ಫೈನಲ್‌ ಪಂದ್ಯದ ವೀಕ್ಷಣೆ ಸಜೀವವಾಗಲಿದೆ.

 

ಬೆಂಗಳೂರು, ಜೈಪುರ, ದೆಹಲಿ, ಮುಂಬೈ, ಅಹಮದಾಬಾದ್‌, ಲಕ್ನೋ ನಗರಗಳಲ್ಲಿ ಉಳಿದ ಪಂದ್ಯಗಳು ನಡೆಯಲಿದ್ದು ಪ್ಲೇಆಫ್‌ ಪಂದ್ಯಗಳ ಸ್ಥಳಗಳನ್ನು ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸಲಿದೆ.