ದೇಲಂಪಾಡಿ: ಟೀಮ್ ಪಾಂಚಜನ್ಯ ದೇಲಂಪಾಡಿಯ ಆಶ್ರಯದಲ್ಲಿ ಹಿಂದು ಭಾಂಧವರ ಚತುರ್ಥ ವರ್ಷದ ಕೆಸರ್‌ಡ್ ಒಂಜಿದಿನ 2025 ಕಾರ್ಯಕ್ರಮ ಜುಲೈ 6, 2025ರ ಭಾನುವಾರದಂದು ವಿಜೃಂಭಣೆಯಿಂದ ನಡೆಯಲಿದೆ.
ದೇಲಂಪಾಡಿಯ ವಾಲ್ತಾಚೆ ಗದ್ದೆಯಲ್ಲಿ ಬೆಳಿಗ್ಗೆ 9 ಗಂಟೆಗೆ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಹಿಂದು ಬಾಂಧವರ ಆಟೋಟ ಸ್ಪರ್ಧೆಗಳು ಸಂಭ್ರಮದಿಂದ ಜರುಗಲಿವೆ.
ಹಿಂದು ಸಮಾಜದ ಏಕತೆ ಮತ್ತು ಸಹಭಾಗಿತ್ವದ ಭಾವನೆ ಬೆಳೆಸುವ ನಿಟ್ಟಿನಲ್ಲಿ ಈ ಕ್ರೀಡಾಕೂಟ ವಿಶೇಷ ಮಹತ್ವ ಹೊಂದಿದ್ದು, ಎಲ್ಲಾ ವಯೋಮಾನದ ಹಿಂದು ಭಾಂಧವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಆಟೋಟ ಸ್ಪರ್ಧೆಗಳು ಜನತೆಯ ಗಮನ ಸೆಳೆಯಲಿವೆ.
ಸಮಸ್ತ ಹಿಂದು ಭಾಂಧವರಿಗೆ ಟೀಮ್ ಪಾಂಚಜನ್ಯ ದೇಲಂಪಾಡಿ ಹೃದಯಪೂರ್ವಕ ಸ್ವಾಗತವನ್ನು ಕೋರಿದೆ.