IPL Update| ಐಪಿಎಪ್ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದ 13 ವರ್ಷದ ಭಾರತೀಯ ಕ್ರಿಕೆಟಿಗ; ಈತನ ಹಿಸ್ಟರಿ ನೋಡಿದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ!

  • 18 Nov 2024 04:17:09 PM

ರಿಪಬ್ಲಿಕ್ ಹಿಂದೂ :- ಸಾಕಷ್ಟು ಯುವ ಕ್ರಿಕೆಟಿಗರಿಗೆ ವೇದಿಕೆ ಎನಿಸಿಕೊಂಡಿರುವ, ದಿಗ್ಗಜ ಕ್ರಿಕೆಟಿಗರ ದಾಖಲೆಗಳಿಗೆ ರೂವಾರಿ ಎನಿಸಿಕೊಂಡಿರುವ ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್  ಐಪಿಎಲ್ ಮೆಗಾ ಹರಾಜಿಗೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಇದೆ‌. ಈ ನಡುವೆ ಈ ಬಾರಿಯ ಮೆಗಾ ಹರಾಜು ಪಟ್ಟಿಯಲ್ಲಿ ಕಂಗೊಳಿಸುತ್ತಿರುವ 13 ವರ್ಷದ  ಭಾರತೀಯ ಕ್ರಿಕೆಟಗನ ಹೆಸರು ಬಾರೀ ಸುದ್ದಿಯಲ್ಲಿದೆ‌. ಕೇವಲ 13 ವರ್ಷದ ಹುಡುಗ ಜಗತ್ತಿನ ಐಶಾರಾಮಿ ಕ್ರಿಕೆಟ್ ಲೀಗ್ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಹೇಗೆ?, ಈತನ ಹಿನ್ನಲೆ ಏನು?, ಯಾರು ಈ ಸಾಧಕ? ಕಂಪ್ಲೀಟ್ ಡೀಟಿಯಲ್ಸ್ ಇಲ್ಲಿದೆ.

ಯಾರು ಈ 13 ವರ್ಷದ ಕ್ರಿಕೆಟಿಗ?

ಸದ್ಯದಲ್ಲೇ ನಡೆಯಲಿರುವ ಐಪಿಎಲ್ ಮೆಗಾ ಹರಾಜಿಗೆ ಈಗಾಗಲೇ 574 ಕ್ರಿಕಟಿಗರ ಪಟ್ಟಿ ತಯಾರಾಗಿದೆ‌. ಈ ಬಾರಿ 366 ಭಾರತೀಯ ಕ್ರಿಕೆಟಿಗರು ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಇಷ್ಟೂ ಕ್ರಿಕೆಟಿಗರ ನಡುವೆ 13 ವರ್ಷದ ಕ್ರಿಕೆಟಿಗ ಬಿಹಾರ ಮೂಲದ ವೈಭವ್ ಸೂರ್ಯವಂಶಿ ಹೆಚ್ಚು ಸುದ್ದಿಯಲ್ಲಿದ್ದಾನೆ‌. ಐಪಿಎಲ್ ಇತಿಹಾಸದಲ್ಲೇ ಇಷ್ಟು ಚಿಕ್ಕ ವಯಸ್ಸಿನ ಯಾವೊಬ್ಬ ಆಟಗಾರನಿಗೂ ಹರಾಜು ಪಟ್ಟಿಯಲ್ಲಿ ಸ್ಥಾನ ಲಭಿಸಿದ್ದಿಲ್ಲ. ಜೊತೆಗೆ ಐಪಿಎಲ್ ನಲ್ಲಿ ಆಡಿದ ದಾಖಲೆಯೂ ಇಲ್ಲ.

ದಾಖಲೆಗಳ ಸರದಾರ ಸೂರ್ಯವಂಶಿ!

ಸದ್ಯ, ಮೆಗಾ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿರುವ 13 ವರ್ಷದ ವೈಭವ್ ಸೂರ್ಯವಂಶಿಯ ದಾಖಲೆಗಳನ್ನು ಗಮನಿಸಿದ್ರೆ ಒಂದು ಕ್ಷಣ ನೀವು ಬೆಚ್ಚಿ ಬೀಳೋದು ಗ್ಯಾರಂಟಿ. 5ನೇ ವಯಸ್ಸಿಗೆ ಕ್ರಿಕೆಟ್ ಆಡಲು ಆರಂಭಿಸಿದ ವೈಭವ್ ಬಲು ಬೇಗ ಕ್ರಿಕಟ್ ನಲ್ಲಿ‌ ಪಳಗಿಬಿಟ್ಟ. ಈಗಾಗಲೇ ರಣಜಿ ಟ್ರೋಫಿ, ಹೇಮಂತ್ ಟ್ರೋಫಿ, ಕೂಚ್ ಬೆಹಾರ್ ಟ್ರೋಫಿ ಮತ್ತು ವಿನೂ ಮಂಕಡ್ ಟೂರ್ನಿಗಳಲ್ಲಿ ಆಡಿರುವ ವೈಭವ್ ಭಾರತೀಯ ಅಂಡರ್-19 ತಂಡದಲ್ಲೂ ಸ್ಥಾನ‌ ಪಡೆದಿದ್ದಾರೆ‌. 

2023ರಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ ವೈಭವ್ ಆ ವರ್ಷ ಆಡಿದ್ದ 'ರಣಧೀರ್ ವರ್ಮ ಅಂಡರ್-19 ಟೂರ್ನಿಯಲ್ಲಿ ತ್ರಿಶತಕ ಸಿಡಿಸಿ ಮಿಂಚಿದ್ದರು‌. ಕಳೆದ ತಿಂಗಳು ಆಸ್ಟ್ರೇಲಿಯಾದ ಅಂಡರ್-19 ತಂಡದ ವಿರುದ್ಧ 58 ಎಸೆತಗಳಲ್ಲೇ ಶತಕ ಸಿಡಿಸ ದಾಖಲೆ ನಿರ್ಮಿಸಿದ್ದರು. ಇದೀಗ ಇದೇ ವೈಭವ್ ಐಪಿಎಲ್ ಮೆಗಾ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಯಾವ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.