ಕುಕ್ಕೆ ಸುಬ್ರಹ್ಮಣ್ಯಕ್ಕೆ ಪತ್ನಿ ಸಮೇತ ಭೇಟಿ ನೀಡಿದ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್; ಈ ದಿಢೀರ್ ಭೇಟಿಗೆ ಕಾರಣ ಏನ್ ಗೊತ್ತಾ?

  • 19 Nov 2024 07:48:51 PM

ರಿಪಬ್ಲಿಕ್ ಹಿಂದೂ :- ರಾಜ್ಯದ ಶ್ರೀಮಂತ ದೇಗುಲ ಎನಿಸಿಕೊಂಡಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಟೀಂ ಇಂಡಿಯಾದ T20 ನಾಯಕ ಸೂರ್ಯ ಕುಮಾರ್ ಯಾದವ್ ಭೇಟಿ ನೀಡಿದ್ದಾರೆ. ಈ ಹಿಂದೆ ಟಿ20 ವಿಶ್ವಕಪ್ ಗೆದ್ದ ಬಳಿಕ ಉಡುಪಿ ಕಾಪು ಮಾರಿಯಮ್ಮ ದೇಗುಲಕ್ಕೆ ಆಗಮಿಸಿದ್ದ ಸೂರ್ಯ ಸದ್ಯ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದರ ಹಿಂದೆ ಕಾರಣವೊಂದಿದೆ.ಈ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.

ಸುಬ್ರಹ್ಮಣ್ಯ ಭೇಟಿಗೆ ಕಾರಣವೇನು?

ಈ ಹಿಂದೆ ಜುಲೈನಲ್ಲಿ ಟಿ20 ವಿಶ್ವಕಪ್ ನಲ್ಲಿ ಭಾರತ ಕಪ್ ಗೆಲಲ್ಲು ಸೂರ್ಯ ಕುಮಾರ್ ಹಿಡಿದ ಕ್ಯಾಚ್ ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಇದೇ ಕಾರಣಕ್ಕೆ ಅಂದು ಸೂರ್ಯ ಪತ್ನಿ ಸಮೇತ ಉಡುಪಿಯ ಕಾಪು ಮಾರಿಯಮ್ಮ ಗುಡಿಗೆ ಭೇಟಿ ನೀಡಿದ್ದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ. 

ಭರ್ಜರಿ ಗೆಲುವು ದಾಖಲಿಸಿದ್ದ ಟೀಂ ಇಂಡಿಯಾ!

ಮೊನ್ನೆಯಷ್ಟೇ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗು ಬಡಿದಿದ್ದ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತ್ತು. ದಾಖಲೆಯ 143 ರನ್ ಗಳ ಗೆಲುವಿನೊಂದಿಗೆ ಸರಣಿ ವಶ ಪಡಿಸಿಕೊಂಡಿತ್ತು. ಇದೇ ಹಿನ್ನಲೆಯಲ್ಲಿ ಇದೀಗ ಸೂರ್ಯ ಕುಮಾರ್ ಯಾದವ್ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ.