ಪೈವಳಿಕೆ: ದಿ. ಸಂಕಯ್ಯ ಭಂಡಾರಿ ಮತ್ತು ದಿ. ಕೆ.ಟಿ. ಜಯಕೃಷ್ಣ ಮಾಸ್ಟರ್ ಅವರ ಸ್ಮರಣಾರ್ಥ ಕ್ರೀಡಾ ಭಾರತಿ ಪ್ರೀಮಿಯರ್ ಲೀಗ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ; ನವೆಂಬರ್ 30 ಮತ್ತು ಡಿಸೆಂಬರ್ 1 ಕ್ಕೆ

  • 26 Nov 2024 02:04:56 PM

ಪೈವಳಿಕೆ:  ಬಾಯಾರು ಮಂಡಲದ ಕ್ರೀಡಾ ಭಾರತಿ ತಂಡವು ದಿ ಸಂಕಯ್ಯ ಭಂಡಾರಿ ಮತ್ತು ದಿ|| ಕೆ.ಟಿ. ಜಯಕೃಷ್ಣ ಮಾಸ್ಟರ್‌ ರವರ ಸ್ಮರಣಾರ್ಥ ಪ್ರೀಮಿಯರ್ ಲೀಗ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟವನ್ನು ಆಯೋಜಿಸಿದೆ. ಈ ಪಂದ್ಯಾಟವು 2024ರ ನವೆಂಬರ್ 30 ಮತ್ತು ಡಿಸೆಂಬರ್ 1ರಂದು ಮಂಡೆಕಾಪು ಕ್ರೀಡಾಂಗಣದಲ್ಲಿ ನಡೆಯಲಿದೆ. 16 ತಂಡಗಳು  ಈ ಟೂರ್ನಮೆಂಟ್ ನಲ್ಲಿ ಭಾಗವಹಿಸಲಿದ್ದಾರೆ.  

*ಪಂದ್ಯಾಟದ ಪ್ರಥಮ ಬಹುಮಾನ ₹15,000 ನಗದು ಮತ್ತು ಟ್ರೋಫಿ. ಎರಡನೇ ಬಹುಮಾನ ₹10,000 ನಗದು ಮತ್ತು ಟ್ರೋಫಿ. ಮೂರನೇ ಬಹುಮಾನ ₹5,000 ನಗದು ಮತ್ತು ನಾಲ್ಕನೇ ತಂಡಕ್ಕೆ ವಿಶೇಷ ಟ್ರೋಫಿ*. ಅತ್ಯುತ್ತಮ ಬ್ಯಾಟ್ಸ್‌ಮನ್, ಬೌಲರ್, ವಿಕೆಟ್ ಕೀಪರ್ ಮತ್ತು ಸರಣಿ ಶ್ರೇಷ್ಠ ಉತ್ತಮ ಹಿಡಿತಗಾರ ಎಂಬತೆ ಪ್ರಶಸ್ತಿಗಳ ಮೂಲಕ ಆಟಗಾರರನ್ನು ಗೌರವಿಸಲಾಗುತ್ತದೆ.

ನವೆಂಬರ್ 30ರಂದು ಬೆಳಿಗ್ಗೆ 8:00 ಗಂಟೆಗೆ ಕ್ರೀಡಾ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಉದ್ಘಾಟನೆ 8:30ಕ್ಕೆ ನಡೆಯಲಿದ್ದು, ಶ್ರೀಕಾಂತ್ (ಭಾಜಪ ರಾಜ್ಯ ಕಾರ್ಯದರ್ಶಿ) ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕ್ರೀಡಾ ಭಾರತಿ ಅಧ್ಯಕ್ಷರು ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


ಡಿಸೆಂಬರ್ 1 ರಂದು  ಬೆಳಗ್ಗೆ  10:00 ಗಂಟೆಗೆ ರವೀಶ್ ತಂತ್ರಿ ಕುಂಟಾರು (ಭಾಜಪ ಜಿಲ್ಲಾ ಅಧ್ಯಕ್ಷರು) ಅವರ ಅಧ್ಯಕ್ಷತೆಯಲ್ಲಿ ಪುಷ್ಪಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಇನ್ನೂ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಸಮಾರೋಪ  ಸಮಾರಂಭವು ಡಿಸೆಂಬರ್ 1ರಂದು ಸಂಜೆ 6:00ಕ್ಕೆ ಜರಗಲಿದೆ. ಪ್ರಮುಖ ಅತಿಥಿಗಳ ಉಪಸ್ಥಿತಿಯಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. 

ಈ ಪ್ರೀಮಿಯರ್ ಲೀಗ್ ಪಂದ್ಯಾಟದ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತದೆ. 16 ತಂಡಗಳ ಈ ಟೂರ್ನಮೆಂಟ್ ಪೈವಳಿಕೆಯ ಕ್ರೀಡಾ ಸಂಸ್ಕೃತಿಗೆ ಹೊಸ ಚೈತನ್ಯವನ್ನು ತುಂಬಲಿದೆ.