ಅಕ್ರಾ: ಘಾನಾದ ಅಕ್ರಾದಲ್ಲಿ ಪ್ರಧಾನಿ ಮೋದಿ ಅವರಿಗೆ ಸ್ಟಾರ್ ಆಫ್ ಘಾನಾ ಪ್ರಶಸ್ತಿ ಪ್ರದಾನ

  • 03 Jul 2025 03:29:34 PM


ಅಕ್ರಾ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಘಾನಾದ ಅತ್ಯುನ್ನತ ಗೌರವವಾದ 'ದಿ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ' ಪ್ರಶಸ್ತಿಯನ್ನು ಬುಧವಾರ ಘಾನಾದ ಅಧ್ಯಕ್ಷರಾದ ಜಾನ್ ಡ್ರಾಮಾನಿ ಮಹಾಮ ಅವರು ಪ್ರದಾನ ಮಾಡಿದ್ದಾರೆ.

 

ಘಾನಾ ಭೇಟಿಯ ಸಂದರ್ಭದಲ್ಲಿ ಈ ಗೌರವ ಪ್ರಶಸ್ತಿಯನ್ನು ಪ್ರಧಾನ ಸಲ್ಲಿಸಲಾಯಿತು. 

 

ಪ್ರಧಾನಿಯವರ ವಿಶಿಷ್ಟ ರಾಜತಾಂತ್ರಿಕ ಚಾತುರ್ಯ ಹಾಗೂ ಜಾಗತಿಕ ನಾಯಕತ್ವವನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಘಾನಾ ಸರ್ಕಾರ ತಿಳಿಸಿದೆ.

 

ಈ ಗೌರವವನ್ನು 140 ಕೋಟಿ ಭಾರತೀಯರ ಪರವಾಗಿ ಸ್ವೀಕರಿಸುತ್ತೇನೆ ಎಂದು ಪ್ರದಾನ ಮಂತ್ರಿ ಮೋದಿ ಹೇಳಿದ್ದಾರೆ. 

 

ಭಾರತ-ಘಾನಾ ನಡುವಿನ ಸ್ನೇಹ ಮತ್ತು ಸಹಕಾರಕ್ಕೆ ಇದು ಹೊಸ ಉಜ್ವಲ ಅಧ್ಯಾಯವಾಗಲಿದೆ ಎಂದು ಅವರು ಹೇಳಿದರು.

 

 ರಾಣಿ ಎಲಿಜಬೆತ್ II, ನೆಲ್ಸನ್ ಮಂಡೇಲಾ, ಕೋಫಿ ಅನ್ನಾನ್, ಕಿಂಗ್ ಚಾರ್ಲ್ಸ್ III ಮುಂತಾದವರು ಈ ಹಿಂದೆ ಈ ಪ್ರಶಸ್ತಿಗೆ ಭಾಜನರಾದವರಾಗಿದ್ದಾರೆ.

 

ಮೋದಿ ಅವರು ಮೂರು ದಶಕಗಳಲ್ಲಿ ಘಾನಾ ಭೇಟಿಯನ್ನಿತ್ತ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.