ಮಧ್ಯಪ್ರದೇಶದ ನರಸಿಂಗಪುರ ಜಿಲ್ಲಾಸ್ಪತ್ರೆಯಲ್ಲಿ ಭೀಕರ ಹತ್ಯೆಕಾಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್!

  • 05 Jul 2025 04:00:16 PM


ಮಧ್ಯಪ್ರದೇಶ: ನರಸಿಂಗಪುರ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಹೃದಯದ್ರಾವಿಕ ಭೀಕರ ಹತ್ಯೆ ಸಂಭವಿಸಿದೆ.

 

 ಆಸ್ಪತ್ರೆಗೆ ಬಂದಿದ್ದ ಹಿಂದೂ ವ್ಯಕ್ತಿ ಮತ್ತು ಅವರ ಮಗಳನ್ನು ಓರ್ವ ವ್ಯಕ್ತಿ ಕತ್ತಿಯಿಂದ ಕೊಲೆ ಮಾಡಿದ್ದಾನೆ. 

 

ಇದರಿಂದ ಆಸ್ಪತ್ರೆಯಲ್ಲಿದ್ದವರಲ್ಲಿ ಭೀತಿ ಮೂಡಿದೆ. ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಹತ್ಯೆಗೆ ವೈಯಕ್ತಿಕ ದ್ವೇಷವೇ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

 

ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.

 

ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ. ಇದನ್ನು ನೋಡಿ ಜನರಲ್ಲಿ ಕೋಪ ಮತ್ತು ಆತಂಕ ಉಂಟಾಗುತ್ತಿದೆ. ಪೊಲೀಸ್ ಇಲಾಖೆಯು ಜನರನ್ನು ಶಾಂತಿಯುತವಾಗಿ ನಡೆಯುವಂತೆ ಮನವಿ ಮಾಡಿದೆ.

 

ಈ ಪ್ರಕರಣದಲ್ಲಿ ಧರ್ಮ ಅಥವಾ ಜಾತಿ ಆಧಾರವಾಗಿ ದುರುಪಯೋಗ ಪಡಿಸಿಕೊಳ್ಳುವುದು ತಪ್ಪು. ಕಾನೂನಿಗೆ ಅನುಸಾರವಾಗಿ ತನಿಖೆ ನಡೆಯುತ್ತಿದೆ ಮತ್ತು ತಪ್ಪಿತಸ್ಥನಿಗೆ ಕಠಿಣ ಶಿಕ್ಷೆ ಆಗುವುದು ಖಚಿತ ಎಂದು ಪೋಲಿಸರು ತಿಳಿಸಿದ್ದಾರೆ.