ಸಕಲೇಶಪುರ: ಸಕಲೇಶಪುರ ನಗರ ವ್ಯಾಪ್ತಿಯ ಮಠಸಾಗರ ಗ್ರಾಮದಲ್ಲಿ ಕಾರಿನಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುವ ಪ್ರಯತ್ನವನ್ನು ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರು ಪೋಲಿಸರ ಸಹಕಾರದೊಂದಿಗೆ ಧಾಳಿ ನಡೆಸಿದ್ದಾರೆ.
ಮಾರುತಿ 800 (ನಂ. KA18M6475) ಕಾರಿನಲ್ಲಿ ಮೂರು ಪ್ಲಾಸ್ಟಿಕ್ ಚೀಲಗಳಲ್ಲಿ ಗೋಮಾಂಸ ತುಂಬಿಸಿಕೊಂಡು ಮಠಸಾಗರದತ್ತ ಸಾಗುತ್ತಿದ್ದನ್ನು ಹಿಂಬಾಲಿಸಿದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಠಸಾಗರದ ಸಮೀಪ ತಡೆದಾಗ, ಕಾರಿನಲ್ಲಿ ಇದ್ದ ಇಬ್ಬರು ಆರೋಪಿತರು ವಾಹನ ಬಿಟ್ಟು ಪರಾರಿಯಾಗಿದ್ದಾರೆ ಎಂದೂ ಕಾರನ್ನು ಪರಿಶೀಲಿಸಿದಾಗ, ಹಿಂಬಾಗದಲ್ಲಿ ಗೋಣಿ ಚೀಲದಲ್ಲಿ ಪ್ಯಾಕೆಟ್ ಮಾಡಲಾಗಿದ್ದ ಗೋಮಾಂಸ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸ್ಥಳಕ್ಕೆ ದೌಡಾಯಿಸಿದ ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಅವರ ನೇತೃತ್ವದ ಪೊಲೀಸರು ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರ ಈ ಸಮಯೋಚಿತ ಕ್ರಮದಿಂದಾಗಿ ಅಕ್ರಮ ಗೋಮಾಂಸ ಸಾಗಾಟಕ್ಕೆ ತಡೆಯುಂಟಾಗಿದ್ದು, ಶೀಘ್ರದಲ್ಲೇ ಆರೋಪಿತರ ಬಂಧನ ಸಾಧ್ಯವೆಂದು ನಿರೀಕ್ಷಿಸಲಾಗಿದೆ.