ಮಂಗಳೂರು: ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನಗಳಲ್ಲಿ ಬಂದಿಳಿದ ಕಾಸರಗೋಡು ಮತ್ತು ಹೊನ್ನಾವರ ಮೂಲದ ಪ್ರಯಾಣಿಕರ ಅನುಮಾನಾಸ್ಪದ ವರ್ತನೆಗಳನ್ನು ಗಮನಿಸಿದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ತಕ್ಷಣ ಅವರನ್ನು ತಪಾಸಣೆ ನಡೆಸಿ ಅಕ್ರಮವಾಗಿ ಚಿನ್ನ ಮತ್ತು ಕೇಸರಿಯನ್ನು ಸಾಗಿಸಲು ಯತ್ನಿಸಿದ ಮೂವರು ಪ್ರಯಾಣಿಕರನ್ನು ಅಧಿಕಾರಿಗಳು ಪತ್ತೆಹಚ್ಚಿ ಬಂಧಿಸಿದ್ದಾರೆ.
ಈ ವೇಳೆ, ಒಳ ಉಡುಪಿನಲ್ಲಿ ಹಾಗೂ ಗುದದ್ವಾರದಲ್ಲಿ ಅಡಗಿಸಿಟ್ಟ 1,429 ಗ್ರಾಂ ಚಿನ್ನದ ಆಭರಣಗಳು ಮತ್ತು 478 ಗ್ರಾಂ ಕೇಸರಿ ಪತ್ತೆಯಾಗಿದೆ. ವಶಪಡಿಸಿಕೊಳ್ಳಲಾದ ಚಿನ್ನ ಮತ್ತು ಕೇಸರಿಯ ಮೌಲ್ಯವು ಸುಮಾರು 1.15 ಕೋಟಿ ರೂಪಾಯಿಗಳಿರಬಹುದು ಎಂದು ಅಂದಾಜಿಸಲಾಗಿದೆ.
ಅಕ್ರಮ ಸಾಗಾಟದ ಹೊಸ ತಂತ್ರಗಳನ್ನು ಬಳಸುತ್ತಿದ್ದ ಈ ಆರೋಪಿಗಳು ಅಧಿಕಾರಿಗಳ ಚಾಕಚಾಕ್ಯದಿಂದ ಸಿಕ್ಕಿಬಿದ್ದರು.ಇಂತಹ ಪ್ರಕರಣಗಳು ದೇಶೀಯ ಸುರಕ್ಷತೆಗೆ ತೊಂದರೆಯನ್ನು ಉಂಟು ಮಾಡಬಹುದು. ಆದ್ದರಿಂದ ಅಂತಾರಾಷ್ಟ್ರೀಯ ಸಾಗಾಟದ ಮೇಲೆ ಇನ್ನು ಇನ್ನಷ್ಟು ನಿಗಾವಹಿಸಲಾಗುತ್ತದೆ ಎಂದು ತಿಳಿದು ಬಂದಿದೆ.