ಸಕಲೇಶಪುರ: ಇತ್ತೀಚಿನ ದಿನಗಳಲ್ಲಿ ಪ್ರೀತಿ-ಪ್ರೇಮ ಅನ್ನುವಂತದ್ದು ತನ್ನ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಿದೆ. ಮಾನವೀಯತೆಯೂ ಇಲ್ಲದ ಪ್ರೀತಿ ಜೀವನವನ್ನೇ ಹಾಳು ಮಾಡುವಷ್ಟು ದುರಂತ ಅಂತ್ಯಕ್ಕೆ ಬಂದುಬಿಟ್ಟಿದೆ. ಪ್ರೀತಿಯಲ್ಲಿ ಬಿದ್ದು ಬದುಕಿನಲ್ಲಿ ನಿರಂತರ ಹೋರಾಡುವವರ ಸಂಖ್ಯೆ ಇತ್ತೀಚೆಗೆ ಅಧಿಕವಾಗಿದೆ. ಇದೀಗ ಇಲ್ಲೊಬ್ಬ ಯುವಕ ಪ್ರೀತಿಯಲ್ಲಿ ಬಿದ್ದು ಪ್ರಿಯತಮೆಯ ಕಾಟಕ್ಕೆ ಬೇಸತ್ತು ಜೀವಾಂತ್ಯಗೊಳಿಸಿದ ಘಟನೆ ಹಾಸನದಲ್ಲಿ ನಡೆದಿದೆ.
ಪ್ರೀತಿಸಿದ ಹುಡುಗಿಯ ಹೆಸರು ಬರೆದಿಟ್ಟು ಜೀವಾಂತ್ಯಗೊಳಿಸಿದ ಯುವಕ..!!
ಪ್ರಿಯತಮೆಯ ಕಾಟಕ್ಕೆ ಬೇಸತ್ತು ವೀಡಿಯೋ ಮಾಡಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಕಲೇಶಪುರದ ಬಾಳೆಗದ್ದೆಯಲ್ಲಿ ನಡೆದಿದೆ. ಕವನ್ ಎಂಬಾತ ಆತ್ಮಹತ್ಯೆಗೊಳಗಾದ ಯುವಕ. ನಾನು ಜೀವನದಲ್ಲಿ ಇಂತಹ ದುಡುಕಿನ ನಿರ್ಧಾರ ತೆಗೆದುಕೊಳ್ಳಲು ಅಂಜಲಿ ಎಂಬ ಯುವತಿಯೇ ಕಾರಣ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟು ವಿಷ ಸೇವಿಸಿ ಜೀವನವನ್ನು ದುರಂತ ಅಂತ್ಯಗೊಳಿಸಿದ್ದಾನೆ.
ಕವನ್ ಬರೆದಿಟ್ಟ ಡೆತ್ ನೋಟ್ ನಲ್ಲಿ ಏನಿತ್ತು ಗೊತ್ತಾ..?
ಕವನ್ ಸಾಯುವ ಮೊದಲು ಡೆತ್ ನೋಟ್ ನಲ್ಲಿ ಅನೇಕ ವಿಚಾರಗಳನ್ನು ಬರೆದಿಟ್ಟುಕೊಂಡಿದ್ದ. ನಾನು ಆಕಸ್ಮಿಕವಾಗಿ ನನ್ನ ಬದುಕಿನಲ್ಲಿ ಬಂದ ಅಂಜಲಿ ಎಂಬಾಕೆಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಆದರೆ ನಂತರ ಅವಳ ನಡವಳಿಕೆ ಸರಿಯಿಲ್ಲವೆಂದು ಗೊತ್ತಾದ ಮೇಲೆ ಅವಳ ಜೊತೆ ಪ್ರೀತಿ ಮುಂದುವರೆಸಲು ಇಷ್ಟವಿಲ್ಲದೆ ದೂರವಾದೆ.
ಆದರೆ ಆಕೆ ನನ್ನ ವಿರುದ್ಧ ದೂರು ನೀಡಿದಳು. ಕಾನೂನಿನಲ್ಲಿ ಹೆಣ್ಣು ಮಕ್ಕಳ ವಿಚಾರಕ್ಕೆ ಹೆಚ್ಚು ಆದ್ಯತೆ ನೀಡುವುದರಿಂದ ನಾನೂ ನೀಡಿದ್ದ ದೂರನ್ನು ಪೊಲೀಸರು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ ಎಂದು ಉಲ್ಲೇಖಿಸಿದ್ದಾನೆ.