ಇಬ್ಬರ ಬಲಿ ಪಡೆದ ಲವ್ ಸ್ಟೋರಿ!; ಪ್ರಿಯಕರನ ಜೀವಾಂತ್ಯಗೊಳಿಸಿದ ಸುದ್ದಿ ಕೇಳಿ ಪ್ರೇಯಸಿಯೂ ಆತ್ಮಹತ್ಯೆ...!

  • 14 Jan 2025 02:10:50 PM

ಪ್ರೀತಿ ಕುರುಡು, ಪ್ರೀತಿಗೆ ಕಣ್ಣಿಲ್ಲ ಇಂತಹ ಅನೇಕ ಮಾತುಗಳನ್ನು ನಾವು ಕೇಳುತ್ತಿರುತ್ತೇವೆ. ಒಬ್ಬರ ಮೇಲೆ ನಿಜವಾದ ಪ್ರೀತಿ ಹುಟ್ಟಲು ಜಾತಿ, ಧರ್ಮ, ಅಂತಸ್ತು, ಸೌಂದರ್ಯ ಇದಾವುದೂ ಲೆಕ್ಕಕ್ಕೆ ಬರೋದಿಲ್ಲ.

 

ಪ್ರೀತಿಯಲ್ಲಿ ಯಶಸ್ಸು ಕಾಣೋರು ಅತ್ಯಂತ ವಿರಳ. ಇನ್ನೂ ಕೆಲವರು ಪ್ರೀತಿಗಾಗಿ ಹೋರಾಡಿ ಜಯ ಸಿಗದೇ ಇದ್ದಾಗ ಜೀವನವನ್ನೇ ಅಂತ್ಯಗೊಳಿಸೋದಿದೆ. ಆದರೆ ಇದೊಂದು ವಿಚಿತ್ರ ಪ್ರೇಮ ಕಥೆ. ಏನಿದು ಸ್ಟೋರಿ..? ಮುಂದೆ ನೋಡಿ...

 

ದುರಂತ ಅಂತ್ಯ ಕಂಡ ದಿಲ್ಸಾದ್- ಜಾನ್ಸನ್ ಪ್ರೀತಿ...!!

 

ದಿಲ್ಸಾದ್ ಮತ್ತು ಜಾನ್ಸನ್ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ವಿಚಿತ್ರ ಅಂದ್ರೆ ದಿಲ್ಸಾದ್ ಗೆ ಮದುವೆಯಾಗಿದ್ದು ಜಾನ್ಸನ್ ಗೆ ಮಾತ್ರ ಮದುವೆಯಾಗಿರಲಿಲ್ಲ. ಆದರೆ ಇವರಿಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು ಮದ್ವೆಯಾಗಿ ಮಕ್ಕಳಿದ್ದರೂ ಈಕೆ ಮತ್ತೊಬ್ಬ ಪುರುಷನ ಜೊತೆ ಸಲುಗೆಯಲ್ಲಿರೋದು ಅವಳ ಪತಿಗೆ ಇಷ್ಟವಿರಲಿಲ್ಲ.

 

ಅದಲ್ಲದೆ ಇವರ ಧರ್ಮವೂ ಕೂಡಾ ಬೇರೆ ಬೇರೆಯಾಗಿದ್ದು ವಿರೋಧ ವ್ಯಕ್ತವಾಗುತ್ತಿತ್ತು. ದಿಲ್ಸಾದ್ ನ ಪತಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. 

 

ಪ್ರಿಯತಮ ಜೀವಾಂತ್ಯಗೊಳಿಸಿದಕ್ಕೆ ಪ್ರಾಣತೆತ್ತ ದಿಲ್ಸಾದ್...!

 

ಇದೆಂಥಾ ಹುಚ್ಚು ಪ್ರೀತಿ ಎಂದರೆ ಮದ್ವೆಯಾಗಿ ಮಕ್ಕಳಿದ್ದರೂ ಅವರ ಬಗ್ಗೆ ಕಾಳಜಿ ವಹಿಸದೆ, ತಾಯಿಯ ಪಾತ್ರವನ್ನು ಸರಿಯಾಗಿ ನಿಭಾಯಿಸದೆ ಮತ್ತೊಬ್ಬ ಪುರುಷನ ಜೊತೆ ಪ್ರೀತಿಯಲ್ಲಿ ಬಿದ್ದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಈಕೆಯೂ ಪ್ರಾಣ ಬಿಟ್ಟಿದ್ದಾಳೆ. ಸಮಾಜ ನಮ್ ಪ್ರೀತಿ ಒಪ್ಪಲ್ಲ ಎಂಬ ಕಾರಣಕ್ಕೆ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾನ್ಸನ್ ಬೆಂಗಳೂರಿನ ರಾಚೇನಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.

 

ಆತನ ಸಾವಿನ ಸುದ್ದಿ ಕೇಳಿ ಪ್ರೇಯಸಿ ದಿಲ್ಸಾದ್ ಕೂಡಾ ಶ್ರೀರಾಮಪುರದ ಅಮೃತಹಳ್ಳಿಯ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ದಿಲ್ಸಾದ್ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತಾಯಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳು ಅನಾಥರಾಗಿದ್ದು ಪತಿ ಪತ್ನಿಯನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.