ಹುಡುಗಿಯರನ್ನು ಮತಾಂತರ ಮಾಡಿದ್ರೆ ಅಂಥವರಿಗೆ ಮರಣದಂಡನೆಯೇ ಶಿಕ್ಷೆ- ಸಿಎಂ ಖಡಕ್ ಘೋಷಣೆ...!!

  • 10 Mar 2025 04:36:23 PM

ಮಧ್ಯ ಪ್ರದೇಶ :ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಸ್ವಾತಂತ್ರ್ಯ ಬಂದ ನಂತರವೂ ಕೂಡಾ ಭಾರತದಲ್ಲಿ ಮಹಿಳೆಗೆ ಸ್ವಾತಂತ್ರ್ಯವಿಲ್ಲದಂತಾಗಿದೆ. ಪ್ರತಿನಿತ್ಯ ಇಂತಹ ಘಟನೆಯ ಬಗ್ಗೆ ನಾವು ಮಾಧ್ಯಮಗಳಲ್ಲಿ ನೋಡುತ್ತಿರುತ್ತೇವೆ.

 

ಇದರ ಜೊತೆಗೆ ತುಚ್ಛ ಮನಸ್ಸಿನ ಅನ್ಯ ಕೋಮಿನ ಪುಂಡರು ಹಿಂದೂ ಹೆಣ್ಮಕ್ಕಳ ಜೊತೆ ಪ್ರೀತಿಯ ನಾಟಕವಾಡಿ ಮತಾಂತರ ಮಾಡಲು ಕೂಡಾ ಪ್ರಯತ್ನಿಸುತ್ತಿದ್ದಾರೆ. ಇದೀಗ ಈ ವಿಚಾರದ ಬಗ್ಗೆ ಮುಖ್ಯಮಂತ್ರಿಯೋರ್ವರು ಖಡಕ್ ಆದೇಶವೊಂದನ್ನು ನೀಡಿದ್ದಾರೆ.

 

ರೇಪ್ ಮಾಡೋರಿಗೆ, ಮತಾಂತರ ಮಾಡೋರಿಗೆ ಮರಣದಂಡನೆಯೇ ಶಿಕ್ಷೆ- ಮಹಾರಾಷ್ಟ್ರ ಸಿಎಂ..!

 

ಹುಡುಗಿಯರನ್ನು ಧಾರ್ಮಿಕವಾಗಿ ಮತಾಂತರ ಮಾಡಲು ಒತ್ತಾಯಿಸುವವರಿಗೆ ಅಥವಾ ಅಪ್ರಾಪ್ತ ಬಾಲಕಿಯರ ಮೇಲೆರಗಿ ಅತ್ಯಾಚಾರ ಮಾಡುವ ಕಾಮುಕರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಹೇಳಿದ್ದಾರೆ.

 

ಭೋಪಾಲ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ. ಹೆಣ್ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮಾಡುವವರ ವಿರುದ್ಧ, ಮತಾಂತರ ಮಾಡಲು ಯತ್ನಿಸುವವರ ವಿರುದ್ಧ ಸರ್ಕಾರ ತುಂಬಾ ಅಲರ್ಟ್ ಆಗಿರುತ್ತದೆ.‌ ಅದಕ್ಕೆ ತಕ್ಕ ಶಿಕ್ಷೆಯನ್ನು ನೀಡಿಯೇ ನೀಡುತ್ತೆ ಎಂದಿದ್ದಾರೆ. ಅವರಿಗೆ ಮರಣದಂಡನೆಯೇ ಶಿಕ್ಷೆ ಎಂದು ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಲ್ಲಿ ಕೂಡಾ ಹೇಳಿದೆ. ಅಂಥವರನ್ನು ನಾವು ಎಂದಿಗೂ ಬಿಡೋದಿಲ್ಲ ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ.

 

`ಮಧ್ಯಪ್ರದೇಶ ಸರ್ಕಾರ ಹೆಣ್ಮಕ್ಕಳ ಸುರಕ್ಷತೆಗೆ ಸಮರ್ಪಿತ....'

 

ಸಿಎಂ ಯಾದವ್ ಅವರು ಎಕ್ಸ್ ಖಾತೆಯಲ್ಲಿ ಹೆಣ್ಮಕ್ಕಳ ಸುರಕ್ಷತೆ ಮತ್ತು ಸ್ವಾಭಿಮಾನಕ್ಕೆ ಯಾವಾಗಲೂ ಸರ್ಕಾರ ಸಮರ್ಪಿತವಾಗಿದೆ ಎಂದು ಬರೆದಿದ್ದಾರೆ. ಇನ್ನು ಮಹಿಳೆಯರ ಅಭ್ಯುದಯಕ್ಕಾಗಿ ಮಾಸಿಕ ಆರ್ಥಿಕ ನೆರವು ಯೋಜನೆಯನ್ನು ಕೂಡಾ ಪ್ರಾರಂಭಿಸಲಾಗಿದ್ದು ಮಹಿಳೆಯರು ಇದರ ಫಲಾನುಭವಿಗಳು ಕೂಡಾ ಆಗಲಿದ್ದಾರೆ. ಇನ್ಮುಂದೆ ಹೆಣ್ಮಕ್ಕಳ ಮೇಲಿನ ಶೋಷಣೆಗೆ ಕಠಿಣ ಕ್ರಮವೆಂದರೆ ಅದು ಮರಣದಂಡನೆ ಎಂದು ಎಚ್ಚರಿಸಿದ್ದಾರೆ.